ಕಾಶ್ಮೀರ ಬ್ಯಾಂಕ್ ನಿಂದ ೪.೯೨ ಲಕ್ಷ ಲೂಟಿ ಮಾಡಿದ ಉಗ್ರರು
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ಘಟಕದಿಂದ ಉಗ್ರರು ಬುಧವಾರ ೪.೯೨ ಲಕ್ಷ ಲೂಟಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗ್ರಾಮೀಣ ಬ್ಯಾಂಕ್ ಘಟಕದಿಂದ ಉಗ್ರರು ಬುಧವಾರ ೪.೯೨ ಲಕ್ಷ ಲೂಟಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪುಲ್ವಾಮಾ ಜಿಲ್ಲೆಯ ವಹಿಬುಗ್ ಗ್ರಾಮದ ಎಲ್ಲಾಕೆವೈ ಡೆಹಾಟಿ ಬ್ಯಾಂಕ್ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್)ಗೆ ನುಗ್ಗಿದ ಗುರುತು ಪತ್ತೆಹಚ್ಚದ ಬಂಧೂಕುಧಾರಿಗಳು ಬೆದರಿಕೆಯೊಡ್ಡಿ ಹಣ ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಂಗಳವಾರ ಇದೆ ಬ್ಯಾಂಕಿನ ಕುಲ್ಗಾಮ್ ಜಿಲ್ಲೆಯ ಘಟಕದಿಂದ ಗುರುತು ಪತ್ತೆ ಹಚ್ಚದ ಉಗ್ರರು ೬೫,೦೦೦ ರೂ ದೋಚಿದ್ದರು.
ಸೋಮವಾರ ಕುಲ್ಗಾಮ್ ಜಿಲ್ಲೆಯಲ್ಲಿ ಹಣ ಕೊಂಡೊಯ್ಯುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ್ದ ಉಗ್ರರು ಇಬ್ಬರು ಬ್ಯಾಂಕ್ ಸುರಕ್ಷಾ ಸಿಬ್ಬಂದಿಗಳು ಮತ್ತು ಐವರು ಪೊಲೀಸರನ್ನು ಒಳಗೊಂಡಂತೆ ಏಳು ಜನರನ್ನು ಹತ್ಯೆಗೈದಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.