ಕವಟಗಿಮಠ 
ಪ್ರಧಾನ ಸುದ್ದಿ

ವಾಟ್ಸಪ್ ಗ್ರೂಪ್ ನಲ್ಲಿ 56 ಅಶ್ಲೀಲ ಚಿತ್ರ ರವಾನಿಸಿದ ಬಿಜೆಪಿ ಎಂಎಲ್ ಸಿ ಕವಟಗಿಮಠ

ಬಿಜೆಪಿ ವಿಧಾನ ಪರಿಷತ್ ಸದಸ್ಯರೊಬ್ಬರು ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಪತ್ರಕರ್ತರಿರುವ....

ಬೆಳಗಾವಿ: ಬಿಜೆಪಿ ವಿಧಾನ ಪರಿಷತ್ ಸದಸ್ಯರೊಬ್ಬರು ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಪತ್ರಕರ್ತರಿರುವ ಬೆಳಗಾವಿಯ ಮೀಡಿಯಾ ಫೋರ್ಸ್‌ ಎಂಬ ವಾಟ್ಸಪ್‌ ಗ್ರೂಪ್ ಗೆ 56 ಅಶ್ಲೀಲ ಚಿತ್ರಗಳನ್ನು ರವಾನಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಿಜೆಪಿ ಎಂಎಲ್ ಸಿ 52 ವರ್ಷದ ಮಹಂತೇಶ ಮಲ್ಲಿಕಾರ್ಜುನ ಕವಟಗಿ ಮಠ ಅವರು ಬೆಳಗಾವಿಯ ಮೀಡಿಯಾ ಫೋರ್ಸ್ ಎಂಬ ಗ್ರೂಪ್ ಗೆ 56 ಅಶ್ಲೀಲ ಫೋಟೋಗಳನ್ನು ಒಳಗೊಂಡ ಪಿಡಿಎಫ್ ವೊಂದನ್ನು ಶೇರ್ ಮಾಡಿದ್ದಾರೆ. ಇದರಿಂದ ಹಲವರಿಗೆ ಮುಜುಗರವಾಗಿದ್ದು, ಗ್ರೂಪ್ ನಿಂದ ಹೊರ ಹೋಗಿದ್ದಾರೆ. ಅಲ್ಲದೆ ಕವಟಗಿ ಮಠ ಅವರನ್ನೂ ಗ್ರೂಪ್ ನಿಂದ ತೆಗೆದು ಹಾಕಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕವಟಗಿಮಠ ಅವರು, ಆಕಸ್ಮಿಕವಾಗಿ ನಡೆದ ಘಟನೆ, ಯಾರಿಗಾದರೂ ಕಿರಿಕಿರಿಯುಂಟು ಮಾಡಿದ್ದರೆ ಕ್ಷಮಿಸಿ ಎಂದಿದ್ದಾರೆ.
ಇತ್ತೀಚೆಗೆ ರಾಯಾಚೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ನಗ್ನಚಿತ್ರಗಳನ್ನು ವೀಕ್ಷಿಸಿ ಸಂಕಷ್ಟಕ್ಕೆ ಸಿಲುಕಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT