ಬಾಬಾ ರಾಮದೇವ್ 
ಪ್ರಧಾನ ಸುದ್ದಿ

ಪ್ರತಿ ಯೋಧನ ಸಾವಿಗೆ ಬದಲಿಯಾಗಿ '೧೦೦ ತಲೆ ಕತ್ತರಿಸಿ': ಬಾಬಾ ರಾಮದೇವ್ ಕರೆ

'ಅವರು ನಮ್ಮ ಒಬ್ಬ ಯೋಧನ ತಲೆ ಕತ್ತರಿಸಿದರೆ ಅದಕ್ಕೆ ಪ್ರತಿಯಾಗಿ ೧೦೦ ತಲೆ ಕತ್ತರಿಸುವುದಕ್ಕೆ ಭಾರತ ಹಿಂಜರಿಯಬಾರದು' ಎಂದು ಯೋಗ ಗುರು ಬಾಬಾ ರಾಮದೇವ್ ಗುರುವಾರ ಹೇಳಿದ್ದಾರೆ.

ನವದೆಹಲಿ: 'ಅವರು ನಮ್ಮ ಒಬ್ಬ ಯೋಧನ ತಲೆ ಕತ್ತರಿಸಿದರೆ ಅದಕ್ಕೆ ಪ್ರತಿಯಾಗಿ ೧೦೦ ತಲೆ ಕತ್ತರಿಸುವುದಕ್ಕೆ ಭಾರತ ಹಿಂಜರಿಯಬಾರದು' ಎಂದು ಯೋಗ ಗುರು ಬಾಬಾ ರಾಮದೇವ್ ಗುರುವಾರ ಹೇಳಿದ್ದಾರೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಒಬ್ಬ ಭಾರತೀಯ ಯೋಧನನ್ನು ಕೊಂದು, ಇಬ್ಬರ ತಲೆ ಕತ್ತರಿಸಿರುವುದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. 
ಪತಂಜಲಿ ಗ್ರಾಹಕ ವಸ್ತುಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ರಾಮದೇವ್ "ಭಾರತ ಇಸ್ರೇಲ್ ಮಾದರಿಯನ್ನು ಅನುಸರಿಸಿ, ಅವರು ನಮ್ಮ ಒಬ್ಬ ಅಥವಾ ಇಬ್ಬರು ಯೋಧರ ತಲೆಕಡೆದರೆ ಅದಕ್ಕೆ ಪ್ರತಿಯಾಗಿ ೧೦೦ ಜನರ ತಲೆ ಕಡಿಯಬೇಕು" ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ. 
"ಹತ್ಯೆಯಾದ ಯೋಧರ ಸಂಬಂಧಿಗಳು ಅಳುವುದನ್ನು ನಾನು ಕಂಡಿದ್ದೇನೆ. ನನ್ನ ಮಗನನ್ನು ಕೊಂದದ್ದೇಕೆ ಎಂದು ಅವರ ತಂದೆ ತಾಯಂದಿರು ಗೋಳಾಡಿದ್ದಾರೆ" ಎಂದು ಕೂಡ ರಾಮದೇವ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಒಬ್ಬ ಭಾರತೀಯ ಯೋಧನನ್ನು ಕೊಂದು, ಇಬ್ಬರ ತಲೆ ಕತ್ತರಿಸಿರುವುದಕ್ಕೆ ಪಾಕಿಸ್ತಾನ ಸೇನೆ ಕಾರಣ ಎಂದು ಸೋಮವಾರ ಭಾರತ ಆರೋಪಿಸಿತ್ತು. 
"ಪ್ರಧಾನಿ ಮೋದಿ ಅವರ ರಕ್ತದಲ್ಲಿ ದೇಶಭಕ್ತಿ ಹರಿಯುತ್ತಿದ್ದು, ತಮ್ಮ ಕರ್ತವ್ಯದಿಂದ ಅವರು ಹಿಂಜರಿಯುವುದಿಲ್ಲ" ಎಂದು ಕೂಡ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ