ಮಿನ್ ಬಹದ್ದೂರ್ ಶೆರ್ಚಾನ್ 
ಪ್ರಧಾನ ಸುದ್ದಿ

ಮೌಂಟ್ ಎವರೆಸ್ಟ್ ನಲ್ಲೆ ಪ್ರಾಣಬಿಟ್ಟ 86 ವರ್ಷದ ಪರ್ವತಾರೋಹಿ ಮಿನ್ ಬಹದ್ದೂರ್

ಈಗಾಗಲೇ ಒಂದು ಬಾರಿ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗೌರವಕ್ಕೆ....

ಕಠ್ಮಂಡು: ಈಗಾಗಲೇ ಒಂದು ಬಾರಿ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರವಾಗಿದ್ದ 86 ವರ್ಷದ  ನೇಪಾಳದ ಹಿರಿಯ ಪರ್ವತಾರೋಹಿ ಮಿನ್ ಬಹದ್ದೂರ್ ಶೆರ್ಚಾನ್ ಅವರು ಶನಿವಾರ ನಿಧನರಾಗಿದ್ದು, ಮತ್ತೊಮ್ಮೆ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ವ್ಯಕ್ತಿ ತಾವಾಗಬೇಕು ಎಂಬ ಕನಸು ಕನಸಾಗಿಯೇ ಉಳಿದಿದೆ.
ಮತ್ತೆ 86ನೇ ವಯಸ್ಸಿನಲ್ಲಿ ಹಿಮಾಲಯ ಪರ್ವತವನ್ನೇರುವ ಸಾಹಸಕ್ಕೆ ಕೈಹಾಕಿದ್ದ ಶೆರ್ಚಾನ್ ಅವರು ಇಂದು 5.14ಕ್ಕೆ ಸಮುದ್ರ ಮಟ್ಟದಿಂದ 5 ಸಾವಿರ ಮೀಟರ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.
8,850 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ವ್ಯಕ್ತಿ ತಾವಾಗಬೇಕು ಎಂಬುದು ಅವರ ಬಯಕೆಯಾಗಿತ್ತು. 
2008ರಲ್ಲಿ ತಮ್ಮ 76ನೇ ವಯಸ್ಸಿನಲ್ಲಿ `ಎವರೆಸ್ಟ್' ಏರಿದ್ದ ಬಹದ್ದೂರ್, ವಿಶ್ವದ ಅತ್ಯಂತ ಎತ್ತರದ ಶಿಖರ ಏರಿದ ಜಗತ್ತಿನ ಹಿರಿಯ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಬಹದ್ದೂರ್ ಅವರ ಈ ವಿಶ್ವದಾಖಲೆಯನ್ನು ಜಪಾನ್‌ನ 80 ವರ್ಷದ ಯುಚಿರೊ ಮಿಯಾರ ಅವರು ಮುರಿದಿದ್ದರು. ಅಳಿಸಿ ಹೋದ ತನ್ನ ವಿಶ್ವದಾಖಲೆಯನ್ನು ಪುನಃ ಸ್ಥಾಪಿಸುವ ಸಲುವಾಗಿ ಬಹದ್ದೂರ್ ಮತ್ತೆ `ಎವರೆಸ್ಟ್' ಏರುವ ಯತ್ನದಲ್ಲಿದ್ದರು. ಆದರೆ ಸಾಧ್ಯವಾಗಲೇ ಇಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ