ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆ ಲೀಲಾ ಸೇಠ್ ನಿಧನ

ದೇಶದ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆ ಹಾಗೂ ದೆಹಲಿ ಹೈಕೋರ್ಟ್ ನ ಮೊದಲ ಮಹಿಳಾ....

ಲೀಲಾ ಸೇಠ್
Lingaraj Badiger
Updated On : 6 May 2017, 6:10 am
ನವದೆಹಲಿ: ದೇಶದ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆ ಹಾಗೂ ದೆಹಲಿ ಹೈಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶೆ, ಖ್ಯಾತ ಲೇಖಕ ವಿಕ್ರಮ ಸೇಠ್ ಅವರ ತಾಯಿ ಲೀಲಾ ಸೇಠ್ ಅವರು ನಿಧನರಾಗಿದ್ದಾರೆ.
 86 ವರ್ಷದ ನಿವೃತ್ತ ನ್ಯಾಯಾಧೀಶೆ ಲೀಲಾ ಸೇಠ್  ಅವರು ನಿನ್ನೆ ರಾತ್ರಿ ತಮ್ಮ ನೋಯ್ಡಾ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
'ಶುಕ್ರವಾರ ರಾತ್ರಿ 10.28ರ ಹೊತ್ತಿಗೆ ನನ್ನ ತಾಯಿಯ ಹೃದಯ ಸ್ತಂಭನವಾಯಿತು. ನಾನು, ನನ್ನ ಸಹೋದರ ವಿಕ್ರಮ್‌, ನನ್ನ ಸಹೋದರಿ ಮತ್ತು  ನಮ್ಮ ಕುಟುಂಬ ಸದಸ್ಯರೆಲ್ಲ ಆಕೆಯ ಸಮೀಪ ಇದ್ದೆವು' ಎಂದು ಲೀಲಾ ಸೇಠ್  ಅವರ ಪುತ್ರ ಶಾಂತಂ ಸೇಠ್  ತಿಳಿಸಿದ್ದಾರೆ. 

Advertisement

Advertisement

ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆಯಾಗಿದ್ದ ಲೀಲಾ ಸೇಠ್ ಅವರು ಲಂಡನ್‌ ಬಾರ್‌ ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಯನ್ನು ಹೊಂದಿದ್ದು, 2012ರಲ್ಲಿ ರಚನೆಗೊಂಡಿದ್ದ ವರ್ಮಾ ಕಮಿಟಿಯ ಸದಸ್ಯೆಯಾಗಿದ್ದರು. ಈ ಸಮಿತಿಯನ್ನು ಸರ್ಕಾರ ಕ್ರಿಮಿನಲ್‌ ಕಾನೂನಿಗೆ ತಿದ್ದುಪಡಿಗಳನ್ನು ಶಿಫಾರಸು ಮಾಡುವುದಕ್ಕೆ ನೇಮಿಸಿತ್ತು.
ಸ್ವತಃ ಲೇಖಕಿಯಾಗಿದ್ದ ಲೀಲಾ ಸೇಠ್  ಅವರು "ಆನ್‌ ಬ್ಯಾಲನ್ಸ್‌' ಎಂಬ ಅಟೋಬಯಾಗ್ರಫಿಯನ್ನು ಬರೆದಿದ್ದರು. ಅದು ಬೆಸ್ಟ್‌ ಸೆಲ್ಲರ್‌ ಆಗಿತ್ತು. ಆ ಬಳಿಕ ಆಕೆ 2014ರಲ್ಲಿ "ಟಾಕಿಂಗ್‌ ಆಫ್ ಜಸ್ಟಿಸ್‌: ಪೀಪಲ್ಸ್‌ ರೈಟ್ಸ್‌ ಇನ್‌ ಮಾಡರ್ನ್ ಇಂಡಿಯಾ' ಕೃತಿಯನ್ನು ಬರೆದಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement