ಮ್ಯಾಟ್ರಿಕ್ಸ್ ಹಗರಣ: ಸಿಎಂ ಪುತ್ರ ಡಾ. ಯತೀಂದ್ರ ವಿರುದ್ಧ ಐಟಿಗೆ ದೂರು
ಅಕ್ರಮ ಹಣ ಹೂಡಿಕೆ ಹಾಗೂ ನೂರಾರು ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ....
ಬೆಂಗಳೂರು: ಅಕ್ರಮ ಹಣ ಹೂಡಿಕೆ ಹಾಗೂ ನೂರಾರು ಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವಿರುದ್ಧ ಸೋಮವಾರ ಆದಾಯ ತೆರಿಗೆ ಇಲಾಖೆಯ ತನಿಖೆ ವಿಭಾಗದಲ್ಲಿ ದೂರು ದಾಖಲಾಗಿದೆ.
ಡಾ.ಯತೀಂದ್ರ ಅವರು ಬೇನಾಮಿ ಆಸ್ತಿ ವರ್ಗಾವಣೆ ಹಾಗೂ ಅಕ್ರಮವಾಗಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿ ವರ್ತೂರು ಕನಕದಾಸ್ ಎಂಬವರು ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ.
ಡಾ. ಯತೀಂದ್ರ ಒಡೆತನದ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಶನ್ಸ್ ಕಂಪನಿಯ ವಿರುದ್ಧವೂ ಕನಕದಾಸ್ ಅವರು ದೂರು ನೀಡಿದ್ದು, ಬೇನಾಮಿ ಸ್ವತ್ತು ಅಧಿನಿಯಮ 1988ರ ಅಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಶನ್ಸ್ ಇಂಡಿಯಾ ಪ್ರೈ ಲಿ. ಗೆ ಸಂಬಂಧಿಸಿದ ಟೆಂಡರ್ ಗೆ ಸಂಬಂಧಿಸಿಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು.