ನೀಟ್ ಪರೀಕ್ಷೆಯಲ್ಲಿ ಉದ್ದನೆಯ ತೋಳಿನ ಬಟ್ಟೆಗೆ ಕತ್ತರಿ ಹಾಕಿಸಿಕೊಂಡ ವಿದ್ಯಾರ್ಥಿನಿ
ಕಣ್ಣೂರು/ತಿರುವನಂತಪುರಂ: ನೀಟ್ (NEET) ಪರೀಕ್ಷೆಗೂ ಮುಂಚಿತವಾಗಿ ನಡೆಸುವ ತಪಾಸಣೆ ವೇಳೆಯಲ್ಲಿ ವಿದ್ಯಾರ್ಥಿನಿಯ ಒಳಉಡುಪನ್ನು ತೆಗೆಯಲು ಸೂಚಿಸಿದ ನಾಲ್ವರು ಅಧ್ಯಾಪಕಿಯರನ್ನು ಒಂದು ತಿಂಗಳ ಕಾಲ ಅಮಾನತು ಮಾಡಲಾಗಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ವ್ಯವಸ್ಥಾಪಕ ಮಂಡಳಿ ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ.
ಈ ಮಧ್ಯೆ ಟಿ ಐ ಎಸ್ ಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಈ ಘಟನೆಯ ಬಗ್ಗೆ ವರದಿ ಕೋರಿ ರಾಜ್ಯ ಮಾನವ ಹಕ್ಕುಗಳ ಆಯೋಗ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಆದೇಶ ಹೊರಡಿಸಿದೆ.
ಹಾಗೆಯೇ ಶಾಲೆಯ ಹೊರಗೆ ಹಲವು ಯುವ ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದ್ದವು.
ಎಷ್ಟೋ ವಿದ್ಯಾರ್ಥಿಗಳ ಉದ್ದ ತೋಳಿನ ಬಟ್ಟೆಯನ್ನು ಕತ್ತರಿಸಿದ್ದ ವರದಿಗಳು ಕೂಡ ಮೂಡಿದ್ದವು. ಪರೀಕ್ಷಾ ಕೇಂದ್ರಗಳನ್ನು ಯುದ್ಧ ಪ್ರದೇಶಗಳನ್ನಾಗಿಸಿರುವ ಈ ನಿಯಮಗಳನ್ನು ಹಲವು ವಿದ್ಯಾರ್ಥಿಗಳು ಟೀಕಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics