ಪ್ರಧಾನ ಸುದ್ದಿ

ಸಂಸತ್ತಿನಲ್ಲಿಯೇ ಕಂದನಿಗೆ ಎದೆಹಾಲುಣಿಸಿದ ಆಸ್ಟ್ರೇಲಿಯಾ ಸೆನೆಟರ್

Guruprasad Narayana
ಸಿಡ್ನಿ: ರಾಷ್ಟ್ರದ ಸಂಸತ್ತಿನಲ್ಲಿ ಹಸುಗೂಸಿಗೆ ಎದೆಹಾಲುಣಿಸಿದ ಮೊದಲ ರಾಜಕಾರಿಣಿ ಎಂಬ ಖ್ಯಾತಿಗೆ ಆಸ್ಟ್ರೇಲಿಯಾ ಸೆನೆಟರ್ ಲಾರಿಸ್ಸಾ ವಾಟರ್ಸ್ ಪಾತ್ರರಾಗಿದ್ದಾರೆ. 
ಎಡಪಂಥೀಯ ಗ್ರೀನ್ ಪಾರ್ಟಿಯ ಸದ್ಯರಾಗಿರುವ ವಾಟರ್ಸ್ ಮಂಗಳವಾರ ಫೆಡರಲ್ ಸೆನೆಟರ್ ಸದನದಲ್ಲಿ ಮತದಾನದ ವೇಳೆಯಲ್ಲಿ ಎರಡೂವರೆ ತಿಂಗಳ ಪುತ್ರಿ ಆಲಿಯಾ ಜಾಯ್ ಅವರಿಗೆ ಎದೆಹಾಲುಣಿಸಿದ್ದಾರೆ.
ಇದರ ಬಗ್ಗೆ ಫೇಸ್ಬುಕ್ ನಲ್ಲಿ ಬರೆದಿರುವ ಸೆನೆಟರ್ "ಫೆಡರಲ್ ಸಂಸತ್ತಿನಲ್ಲಿ ಎದೆಹಾಲು ಕುಡಿದ ಮೊದಲ ಮಗು ನನ್ನ ಮಗಳು ಎಂಬುದು ನನಗೆ ಹೆಮ್ಮೆಯಾಗಿದೆ! ಹೀಗೆ ಕೌಟುಂಬಿಕ ಸ್ನೇಹಿ  ಉದ್ಯೋಗ ಸಂಸ್ಥೆಗಳು, ಕೈಗೆ ಎಟುಕುವ ಮಕ್ಕಳ ಪೋಷಣಾ ಕೇಂದ್ರಗಳು ಎಲ್ಲರಿಗು ದೊರಕಬೇಕು" ಎಂದಿದ್ದಾರೆ. 
ಕಳೆದ ವರ್ಷವಷ್ಟೇ ಸಂಸತ್ತಿನಲ್ಲಿ ಮಕ್ಕಳಿಗೆ ಮೊಲೆಯುಣಿಸಲು ಅವಕಾಶ ನೀಡಲಾಗಿತ್ತು. ಆದರೆ ಇಲ್ಲಿಯವರೆಗೆ ಈ ಅವಕಾಶವನ್ನು ಯಾರೂ ಬಳಸಿರಲಿಲ್ಲ. 
SCROLL FOR NEXT