ಶ್ರೀನಗರ: ಸೇನಾ ಶಾಲೆಗೆ ಮರುನಾಮಕರಣ ಮಾಡಲಾಗಿದ್ದು, ಇತ್ತೀಚಿಗಷ್ಟೇ ದಕ್ಷಿಣ ಕಾಶ್ಮೀರದಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಯಾದ ಕಾಶ್ಮೀರದ 22 ವರ್ಷದ ಯುವ ಸೇನಾಧಿಕಾರಿ ಲೆಫ್ಟಿನಂಟ್ ಉಮರ್ ಫಯಾಜ್ ಅವರ ಹೆಸರಿಡಲಾಗಿದೆ ಎಂದು ಶನಿವಾರ ಭಾರತೀಯ ಸೇನೆ ತಿಳಿಸಿದೆ.
ಹುತಾತ್ಮ ಯೋಧ ಉಮರ್ ಫಯಾಜ್ ಅವರ ಕುಟುಂಬಕ್ಕೆ ಸೇನೆಯ ವಿಮಾ ನಿಧಿಯಿಂದ 75 ಲಕ್ಷ ರುಪಾಯಿ ಚೆಕ್ ಹಾಗೂ ರಜಪೂತಾನ ರೈಫಲ್ಸ್‌ನಿಂದ 1 ಲಕ್ಷ ರುಪಾಯಿ ಚೆಕ್ ಅನ್ನು ನೀಡಲಾಗಿದೆ ಎಂದು ಸೇನೆ ತಿಳಿಸಿದೆ.
ಸೇನಾ ಶಾಲೆಯೊಂದಕ್ಕೆ ‘ಲೆ. ಉಮರ್ ಫಯಾಜ್ ಸೌಹಾರ್ದ ಶಾಲೆ’ ಎಂದು ಮರುನಾಮಕರಣದ ಮಾಡಿರುವ ಕುರಿತು ಸೇನೆ ಪ್ರಕಟಿಸಿದೆ.
ಉಮರ್ ಫಯಾಜ್ ಅವರು ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಅವರನ್ನು ಅಪಹರಿಸಿದ್ದ ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದರು. ಬಳಿಕ ಅವರ ಶವ ಶೋಪಿಯಾನ್ ನಲ್ಲಿ ಪತ್ತೆಯಾಗಿತ್ತು.