ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ; ಕಣ್ಣೂರಿನಲ್ಲಿ ಎಪಿಎಸ್ ಪಿಎ ವಿಧಿಸಿ ಎಂದ ಬಿಜೆಪಿ

ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ರಾಜಕೀಯ ಪಿತೂರಿ ಎಂದಿರುವ ಭಾರತೀಯ ಜನತಾ ಪಕ್ಷ, ಕಣ್ಣೂರಿನಲ್ಲಿ ಶಸ್ತ್ರಾಸ್ತ್ರ ಪಡೆಗಳ ವಿಶೇಷ ಕಾಯ್ದೆ ( ಎಪಿಎಸ್ ಪಿಎ) ಹೇರಿ ಎಂದು ಶನಿವಾರ ಆಗ್ರಹಿಸಿದೆ.

ಕಣ್ಣೂರು/ತಿರುವನಂತಪುರಂ: ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ರಾಜಕೀಯ ಪಿತೂರಿ ಎಂದಿರುವ ಭಾರತೀಯ ಜನತಾ ಪಕ್ಷ, ಕಣ್ಣೂರಿನಲ್ಲಿ ಶಸ್ತ್ರಾಸ್ತ್ರ ಪಡೆಗಳ ವಿಶೇಷ ಕಾಯ್ದೆ (ಎಪಿಎಸ್ ಪಿಎ) ಹೇರಿ ಎಂದು ಶನಿವಾರ ಆಗ್ರಹಿಸಿದೆ.
ಶುಕ್ರವಾರ ರಾತ್ರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಬಿಜು ಎಂಬುವವರನ್ನು ಕಣ್ಣೂರಿನ ಪಯ್ಯನೂರಿನಲ್ಲಿ ಕೊಲೆ ಮಾಡಲಾಗಿತ್ತು. ಕಣ್ಣೂರು ರಾಜಕೀಯ ಕೊಲೆಗಳ ತವರೂರಾಗಿ ಸದಾ ಸುದ್ದಿಯಲ್ಲಿದೆ. 
ಈ ಕೊಲೆಗೆ ಆಡಳಿತ ಕಮ್ಯುನಿಸ್ಟ್ ಪಕ್ಷ ಮತ್ತು ಭಾರತೀಯ ಮಾರ್ಕ್ಸಿಸ್ಟ್ ಕಾರ್ಯಕರ್ತರು ಕಾರಣ ಎಂದು ಬಿಜೆಪಿ ಆರೋಪಿಸಿದ್ದು, ಎಡ ಪಕ್ಷ ಇದನ್ನು ಅಲ್ಲಗೆಳೆದಿದೆ. 
ಬಿಜೆಪಿ ಶನಿವಾರ ಕಣ್ಣೂರ್ ಬಂಧ್ ಕರೆದಿದ್ದು, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿದೆ. ರಸ್ತೆ ಮೇಲೆ ವಾಹನಗಳು ವಿರಳವಾಗಿದ್ದು, ಯಾವುದೇ ಅಶಾಂತಿಯುತ ಘಟನೆ ಸಂಭವಿಸಿಲ್ಲ. 
ಕೇರಳದಲ್ಲಿರುವ ಬಿಜೆಪಿ ಪಕ್ಷದ ಏಕೈಕ ಶಾಸಕ ತಂಡದ ಮುಖಂಡರೊಂದಿಗೆ ಶನಿವಾರ ರಾಜ್ಯಪಾಲ ಪಿ ಸದಾಶಿವಂ ಅವರನ್ನು ಭೇಟಿ ಮಾಡಿ ಕಣ್ಣೂರಿನಲ್ಲಿ ಎಪಿಎಸ್ ಪಿಎ ವಿಧಿಸಲು ಆಗ್ರಹಿಸಿದ್ದಾರೆ. 
"ಇಂದು ಕೇರಳ ಪೊಲೀಸರು ಸಿಪಿಐ-ಎಂನ ರಾಜಕೀಯ ಸಂಘಟನೆಯಾಗಿದ್ದು ಇಲ್ಲಿನ ನಾಗರಿಕರ ಆಸ್ತಿ ಮತ್ತು ಜೀವವನ್ನು ಉಳಿಸಲು ವಿಫಲರಾಗಿದ್ದಾರೆ" ಎಂದು ದೂರಿದ್ದಾರೆ. 
ನೆನ್ನೆ ಕೊಲೆಯಾಗಿರುವ ಬಿಜು ಜುಲೈ ೨೦೧೬ ರಲ್ಲಿ ಸಿಪಿಐ-ಎಂ ಕಾರ್ಯಕರ್ತ ಧನರಾಜ್ ಅವರ ಕೊಲೆ ಆರೋಪದ ಮೇಲೆ ೧೨ ನೇ ಆರೋಪಿಯಾಗಿದ್ದರು ಮತ್ತು ಈಗ ಮೃತರಾಗುವುದಕ್ಕೂ ಮುಂಚಿತವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಿಜು ತಮ್ಮ ಗೆಳೆಯರೊಂದಿಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿರುವಾಗ ಇನ್ನೋವಾ ಕಾರು ಢಿಕ್ಕಿ ಹೊಡೆದು ಈ ಹತ್ಯೆಗೆ ಕಾರಣವಾಗಿದೆ. 
ಈ ಅಪರಾಧಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ಕು ಜನರು ಈ ಕೊಲೆಗೆ ಕಾರಣ ಎಂದಿದ್ದಾರೆ. 
ಕಣ್ಣೂರಿಗೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ವಿಜಯನ್ ಇದು ದುರದೃಷ್ಟಕರ ಘಟನೆ ಎಂದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: 9 ಗಂಟೆಗಳ ಇಂಡಿಯಾ ಕೂಟದ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!