ಪ್ರಧಾನ ಸುದ್ದಿ

ಸರ್ಕಾರಿ ಜಾಗದಲ್ಲಿರುವ ಅಕ್ರಮ ಮನೆ ಸಕ್ರಮಕ್ಕೆ ಸಚಿವ ಸಂಪುಟ ಅಸ್ತು

Lingaraj Badiger
ಬೆಂಗಳೂರು: ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ವಾಸದ ಮನೆಗಳನ್ನು ಸಕ್ರಮ ಮಾಡಲು ಬುಧವಾರ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಮಹಾನಗರ ಪಾಲಿಕೆಯ ಕೇಂದ್ರ ಸ್ಥಾನದಿಂದ 18 ಕಿ.ಮೀ ವ್ಯಾಪ್ತಿಯ ಹೊರಗಿರುವ  ವಾಸದ ಮನೆ, ನಗರ ಸಭೆ ಕೇಂದ್ರ ಸ್ಥಾನದಿಂದ 5ಕಿ.ಮೀ ವ್ಯಾಪ್ತಿಯ ಹೊರಗಿರುವ ವಾಸದ ಮನೆ ಹಾಗೂ ಪ.ಪಂ, ಪುರಸಭೆ ಕೇಂದ್ರ ಸ್ಥಾನದಿಂದ 3 ಕಿ.ಮೀ ವ್ಯಾಪ್ತಿಯ ಹೊರಗಿರುವ ವಾಸದ ಮನೆಯನ್ನ ಸಕ್ರಮಗೊಳಿಸಲು ನಿರ್ಧರಿಸಲಾಗಿದೆ.
ಅಕ್ರಮ ಮನೆಗಳ ಸಕ್ರಮಕ್ಕೆ 5 ಸಾವಿರ ದಂಡ ವಿಧಿಸಲು ಸಚಿವ ಸಂಪುಟ ನಿರ್ಧರಿಸಿದ್ದು, ಇದಕ್ಕಾಗಿ 10 ಲಕ್ಷ ಫಲಾನುಭವಿಗಳನ್ನು ಗುರುತಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ಇನ್ನು ಶಿವಮೊಗ್ಗ ಕೃಷಿ ವಿವಿಯ ಹೊಸ ಕ್ಯಾಂಪಸ್ ನ್ನು ಇರುವಕ್ಕಿ ಎಂಬಲ್ಲಿ ಸ್ಥಾಪಿಸಲು ಟೆಂಡರ್ ಗೆ ಒಪ್ಪಿಗೆ ಸೂಚಿಸಲಾಗಿದೆ. ಇದು 138 ಕೋಟಿ 69 ಲಕ್ಷ  ವೆಚ್ಚದ ಕಾಮಗಾರಿಯಾಗಿದೆ.
ಪರಮಪ್ಪ ಕೆಂದಾಟೆ ಎಂಬ ಮುಖ್ಯ ಶಿಕ್ಷಕ ಮೂರು ಸಾವಿರ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು ಉಪಲೋಕಾಯುಕ್ತರ ಶಿಫಾರಸ್ಸಿನ ಮೇರೆಗೆ  ಪರಮಪ್ಪರನ್ನ  ವಜಾ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
SCROLL FOR NEXT