ಪ್ರಧಾನ ಸುದ್ದಿ

ಭಾರತ ಮತ್ತು ಬಾಂಗ್ಲಾದೇಶ ನಡುವೆ ಜಂಟಿ ಸೇನಾ ಸಮರಾಭ್ಯಾಸ ಇಂದು ಆರಂಭ

Sumana Upadhyaya
ನವದೆಹಲಿ: ಮಿಜೋರಂನಲ್ಲಿರುವ ವೈರಂಗ್ಟೆಯಲ್ಲಿರುವ ಭಾರತದ ಒಳನುಸುಳುಕೋರರ ನಿಗ್ರಹ ಮತ್ತು ಅರಣ್ಯ ಯುದ್ಧ ಶಾಲೆಯಲ್ಲಿ ನಡೆಯಲಿರುವ ಜಂಟಿ ಸೇನಾ ಸಮರಾಭ್ಯಾಸದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಸೇನೆಗಳು ಭಾಗಿಯಾಗಲಿವೆ.
ಇಂದಿನಿಂದ ಇದೇ ತಿಂಗಳು 18ರವರೆಗೆ ಸಂಪ್ರಿತಿ ಸಮರಾಭ್ಯಾಸ ನಡೆಯಲಿದೆ. ಎರಡೂ ದೇಶಗಳ ದ್ವಿಪಕ್ಷೀಯ ಮಿಲಿಟರಿ ಸಂಬಂಧವನ್ನು ಉತ್ತೇಜಿಸುವ ಸಲುವಾಗಿಯಾಗಿ ಈ ಸಮರಾಭ್ಯಾಸವನ್ನು ನಡೆಸಲಾಗುತ್ತಿದ್ದು, ಬಂಡುಕೋರರ ನಿಗ್ರಹ ಮತ್ತು ಭಯೋತ್ಪಾದನೆ ಕಾರ್ಯಚರಣೆಯನ್ನು ನಿಗ್ರಹಿಸಲು ಅರೆ ಪರ್ವತದ ಕಾಡಿನ ಭೂಪ್ರದೇಶದಲ್ಲಿ ಇದು ನಡೆಯಲಿದೆ. 
ವೈರಂಗ್ಟೆಯಲ್ಲಿ ಕ್ಷೇತ್ರ ತರಬೇತಿ, ಮೇಘಾಲಯದ ಉಮ್ರೊಯ್ ಕಂಟೋನ್ ಮೆಂಟ್ ನಲ್ಲಿ ಕಮಾಂಡ್ ಪೋಸ್ಟ್ ತರಬೇತಿಯನ್ನು ಸಂಪ್ರಿತಿ ತರಬೇತಿ ಒಳಗೊಂಡಿದೆ.
ಇದರ ಹೊರತಾಗಿ, ಇದೇ 13ರಿಂದ ಡಿಸೆಂಬರ್ 10ರವರೆಗೆ ಬಿಹಾರದ ದಾನಾಪುರ್ ಕಂಟೋನ್ ಮೆಂಟ್ ನಲ್ಲಿ ಭಾರತ ಹಾಗೂ ಬಾಂಗ್ಲಾದೇಶಗಳ ಮಿಲಿಟರಿ ನಡುವೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಕುರಿತು ಜಂಟಿ ತರಬೇತಿ ನಡೆಯಲಿದೆ. 
ಕಳೆದ ವರ್ಷ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಜಂಟಿ ಸಮರಾಭ್ಯಾಸ ಮತ್ತು 2015ರಲ್ಲಿ ಪಶ್ಚಿಮ ಬಂಗಾಳದ ಬಿನ್ನಗುರಿಯಲ್ಲಿ ಈ ಜಂಟಿ ಸಮರಾಭ್ಯಾಸ ನಡೆದಿತ್ತು.
SCROLL FOR NEXT