ಪ್ರವಾಸ-ವಾಹನ

ಮಾರುತಿ ನೀನ್ಯಾವಾಗ ಬರುತಿ?

2015ರ ಹೊಸ ವರುಷಕ್ಕೆ ಮಾರುತಿ ಸುಝುಕಿ ಎರಡು ಹೊಸ ಕಾರುಗಳನ್ನು ಪರಿಚಯಿಸುತ್ತಿದೆ. ಇವೆರಡೂ ಕಾರುಗಳಿಗೆ ಇನ್ನು ಮಾರುಕಟ್ಟೆ ಹೆಸರಿಟ್ಟಿಲ್ಲ. ಬದಲಾಗಿ ವೈಬಿಎ ಹಾಗೂ ವೈಆರ್‌ಎ ಎಂದು ಕೋಡ್‌ ನೇಮ್ ನೀಡಲಾಗಿದೆ...

ಮಾರುತಿ ಸುಝುಕಿ ಹೊಸತನಕ್ಕೆ ಹೊರಳುತ್ತಿದೆ. ಹಳೇ ವಾಹನಗಳನ್ನೇ ಇರಿಸಿಕೊಂಡು ಮಾರುಕಟ್ಟೆಯನ್ನು ಆಳುವ ಇದು 2015ಕ್ಕೆ ಎರಡು ಹೊಸ ಕಾರುಗಳನ್ನು ಪರಿಚಯಿಸುತ್ತಿದೆ.

ಸ್ವಿಫ್ಟ್ ಹಾಗೂ ಆಲ್ಟೋ ಕಾರುಗಳಲ್ಲಿ ನಾನಾ ಮಾದರಿಗಳನ್ನು ಮಾರುಕಟ್ಟೆಗೆ ತಂದು ಖುಷಿ ಪಡುತ್ತಿದ್ದ ಮಾರುತಿ ಒಂದು ಕಾಂಪ್ಯಾಕ್ಟ್ ಎಸ್‌ಯುವಿ ಹಾಗೂ ಹ್ಯಾಚ್‌ಬ್ಯಾಕ್ ಅನ್ನು ವಾಹನ ಪ್ರಿಯರಿಗೆ ನೀಡಲು ಸಜ್ಜಾಗುತ್ತಿದೆ. ಇವೆರಡು ಕಾರುಗಳು ಸ್ಪೈಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದು, ವಿನ್ಯಾಸದಲ್ಲಿ ಹೊಸತನವಿರುವುದು ಗೊತ್ತಾಗುತ್ತಿದೆ.

ಅದರಲ್ಲೂ ಕಾಂಪ್ಯಾಕ್ಟ್ ಎಸ್‌ಯುವಿ ಭಾರತದ ರಸ್ತೆಗಳಲ್ಲಿ ಕಂಡುಬಂದಿದೆ. ಹ್ಯಾಚ್‌ಬ್ಯಾಕ್ ಚೀನಾದ ವಿಮಾನ ನಿಲ್ದಾಣದಲ್ಲಿ ಕಣ್ಣಿಗೆ ಬದ್ದಿದ್ದು, ಇದೂ ಸ್ವಿಫ್ಟ್ ಹಾಗೂ ಸಿಯಾಜ್‌ನ ಮಧ್ಯದ ದರದಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿಯಿದೆ.

ಇಕೋಸ್ಪೋರ್ಟ್ ಹಾಗೂ ಡಸ್ಟರ್ ಕಾರುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವಾಗಲೇ ಇವೆರಡು ವಾಹನಗಳ ತಯಾರಿಕೆಗೆ ಮಾರುತಿ ಮುಂದಾಗಿತ್ತು. ಆದರೆ ಸಣ್ಣ ಕಾರುಗಳನ್ನು ಮಾತ್ರ ಮಾರುಕಟ್ಟಗೆ ಬಿಡುತ್ತ ಎಸ್‌ಯುವಿಯನ್ನು ಮಾರುತಿ ಸಂಪೂರ್ಣವಾಗಿ ನಿರ್ಲಕ್ಷಿಸಿಕೊಂಡು ಬಂತು. ಮತ್ತೊಂದೆಡೆ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಹುಂಡೈ ಐ-20 ಹಾಗೂ ಫೀಯಟ್ ಪುಂಟೋ ಗಾಡಿಗಳು ಒಂದಾದ ಮೇಲೊಂದು ಬದಲಾವಣೆ ಮಾಡುತ್ತಾ ಸಾಗಿದರೆ ಸ್ವಿಫ್ಟ್‌ನಲ್ಲಿ ಅಂಥ ಬದಲಾವಣೆ ಬರಲಿಲ್ಲ.

ಐಷಾರಾಮಿ ಸೌಲಭ್ಯಗಳು ಮಾರುತಿ ಗ್ರಾಹಕರಿಗೆ ಕೈಗೆಟುಕದಂತಾಯಿತು. ತಡವಾಗಿ ಎಚ್ಚೆತ್ತುಕೊಂಡ ಮಾರುತಿ ಎರಡು ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಆಕರ್ಷಕ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟಗೆ ಬರುತ್ತಿದೆ. ಆಕರ್ಷಖ ಹೊರ ವಿನ್ಯಾಸದ ಜತೆಗೆ ಒಳ ವಿನ್ಯಾಸದಲ್ಲೂ ಬದಲಾವಣೆ ತರುತ್ತಿದೆ.

ಇವೆರಡೂ ಕಾರುಗಳಿಗೆ ಇನ್ನು ಮಾರುಕಟ್ಟೆ ಹೆಸರಿಟ್ಟಿಲ್ಲ. ಬದಲಾಗಿ ವೈಬಿಎ ಹಾಗೂ ವೈಆರ್‌ಎ ಎಂದು ಕೋಡ್‌ನೇಮ್ ನೀಡಲಾಗಿದೆ.

ವೈಆರ್‌ಎ ಕೋಡ್‌ನೇಮ್‌ನಲ್ಲಿರುವ ಹ್ಯಾಚ್‌ಬ್ಯಾಕ್‌ನ ಹಿಂಬದಿ ಬಿಎಂಡಬ್ಲ್ಯೂನ ವಿನ್ಯಾಸವನ್ನು ಹೋಲುತ್ತದೆ. ಸಾಮಾನ್ಯವಾಗಿರುವ ಹ್ಯಾಚ್‌ಬ್ಯಾಕ್‌ಗಿಂತ ತುಸು ದೊಡ್ಡದಾಗಿದ್ದು ಕಡಿಮೆ ದರದಲ್ಲಿ ಹೊಸ ಶೈಲಿಯ ಹ್ಯಾಚ್‌ಬ್ಯಾಕ್ ಬಿಡುಗಡೆ ಮಾಡುತ್ತೇವೆ ಎಂದು ಮಾರುತಿ ಹೊರಟಿದೆ.

1.3 ಮಲ್ಟಿಜೆಟ್ ಎಂಜಿನ್ ಅನ್ನು ಇದಕ್ಕೆ ಬಳಸಲಾಗಿದೆ. ಇನ್ನು ಕಾಂಪ್ಯಾಕ್ಟ್ ಎಸ್‌ಯುವಿಗೆ ಹೊಸದಾಗಿ ಮಾರುಕಟ್ಟೆಗೆ ಬಂದಿರುವ 1.5 ಮಲ್ಟಿಜೆಟ್ ಎಂಜಿನ್ ಅನ್ನು ಬಳಸಲಾಗುತ್ತಿದೆ. ಸ್ವಿಫ್ಟ್ ವಿನ್ಯಾಸದಲ್ಲೇ ಕೊಂಚ ಬದಲಾವಣೆ ಮಾಡಿ ಈ ಎಸ್‌ಯುವಿ ಬಿಡುಗಡೆ ಮಾಡಲಾಗುತ್ತಿದೆ.

2015ರ ಅಂತ್ಯಕ್ಕೆ ಇದು ಮಾರುಕಟ್ಟೆಗೆ ಬರಲಿದ್ದು ಐವಿ-4 ಎಂದು ಹೆಸರಿಡುವ ಸಾಧ್ಯತೆಯಿದೆ. ಇಕೋಸ್ಪೋರ್ಟ್‌ನ ದರದಲ್ಲಿ ಇದು ದೊರೆಯಬಹುದು. ಆದರೆ ವೈಆರ್ ಕೋಡ್‌ನೇಮ್ ಹೊಂದಿರುವ ಹ್ಯಾಚ್‌ಬ್ಯಾಕ್ ಇದಕ್ಕೂ ಮುಂಚೆ ಮಾರುಕಟ್ಟೆಗೆ ಬರಲಿದೆ.

SCROLL FOR NEXT