ಪ್ರವಾಸ-ವಾಹನ

ವೋಕ್ಸ್ ವ್ಯಾಗನ್ ಮೇಲೆ ಆರು ತಿಂಗಳು ನಿಗಾ

Srinivasamurthy VN

ನವದೆಹಲಿ: ವೋಕ್ಸ್‍ವ್ಯಾಗನ್‍ನ ಮಾಲಿನ್ಯ ತಪಾಸಣೆ ಮೋಸವನ್ನು ``ವ್ಯವಸ್ಥಿತ ಅಪರಾಧ'' ಎಂದು ವ್ಯಾಖ್ಯಾನಿಸಿರುವ ಕೇಂದ್ರ ಸರ್ಕಾರವು, ಕಂಪನಿಯ ಡೀಸೆಲ್ ವಾಹನಗಳ ಬಗ್ಗೆ ಇನ್ನೂ  ಆರು ತಿಂಗಳ ಕಾಲ ನಿಗಾ ಇರಿಸಲಾಗುವುದು ಎಂದು ಘೋಷಿಸಿದೆ.

``ರಸ್ತೆಯಲ್ಲಿ ಸಂಚಾರ ನಡೆಸಿದ ವಾಹನಗಳನ್ನು ಪರೀಕ್ಷಿಸಿದಾಗ ಮಾಲಿನ್ಯ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ. ಇದು ವ್ಯವಸ್ಥಿತ ಅಪರಾಧ'' ಎಂದು ಕೇಂದ್ರ ಬೃಹತ್  ಕೈಗಾರಿಕೆ ಸಚಿವ ಅನಂತ್ ಗೀತೆ ಹೇಳಿದರು. ಕಂಪನಿಯು ಭಾರತದಲ್ಲಿ ಮಾಲಿನ್ಯ ನಿಯಮಾವಳಿಗಳನ್ನು ಉಲ್ಲಂಘಿಸಿರುವುದನ್ನು ಆಟೊಮೊಟೀವ್ ರೀಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ (ಎಆರ್‍ಎಐ) ಪತ್ತೆ ಮಾಡಿದೆ.

SCROLL FOR NEXT