ಪ್ರವಾಸ-ವಾಹನ

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಜಾಜ್ 150ಎನ್ಎಸ್

Srinivasamurthy VN

ಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಬಜಾಜ್ ತನ್ನ ಅತ್ಯಂತ ಯಶಸ್ವಿ ಸರಣಿಯಾದ ಪಲ್ಸರ್ ನ ಮುಂದಿನ ಆವೃತ್ತಿಯಾಗಿ ಪಲ್ಸರ್ 150 ಎನ್ ಎಸ್ ಸರಣಿಯ ಬೈಕು ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಬಜಾಜ್ ಪಲ್ಸರ್ ಸರಣಿಯ ಬೈಕುಗಳಲ್ಲಿ ಈಗಾಗಲೇ 200 ಸಿಸಿ ಸಾಮರ್ಥ್ಯದ ಬೈಕುಗಳ ವಿಭಾಗದಲ್ಲಿ ಎನ್ ಎಸ್ ಸರಣಿಯ ಬೈಕುಗಳಿದ್ದು, ಯುವಕರನ್ನು ಆಕರ್ಷಿಸುವಲ್ಲಿ ಇದು ಯಶಸ್ವಿಯಾಗಿದೆ.  ಇಂತಹ ನೇಕೆಡ್ ಸರಣಿಯ ಬೈಕುಗಳನ್ನು ಸುಜುಕಿ (ಗಿಕ್ಸರ್-155), ಯಮಹ (ಎಫ್ ಜೆಡ್-ಎಸ್ ವರ್ಶನ್ 2.0) ಮತ್ತು ಹೊಂಡಾ (ಸಿಬಿ ಟೈಗರ್) ಸಂಸ್ಥೆಗಳು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ  ಮಾಡಿದ್ದರೂ, ಇಂತಹ ನೇಕೆಡ್ ಬೈಕುಗಳ ಮೇಲಿನ ಯುವಕ ಆಕರ್ಷಣೆ ಕಡಿಮೆಯಾಗಿಲ್ಲ. ಇದೇ ಕಾರಣಕ್ಕಾಗಿ ಬಜಾಜ್ ಕೂಡ ತನ್ನ ಪಲ್ಸರ್ 200 ಎನ್ಎಸ್ ಸರಣಿಯ ಬೈಕುಗಳನ್ನು 150ಗೂ  ವಿಸ್ತರಿಸಿದ್ದು, ಶೀಘ್ರದಲ್ಲೇ ಬಜಾಜ್ ಪಲ್ಸರ್ 150ಎನ್ ಎಸ್ ಬೈಕುಗಳು ಮಾರುಕಟ್ಟೆಯನ್ನು ಪ್ರವೇಶ ಮಾಡಲಿವೆ.

ಬಜಾಜ್ ಪಲ್ಸರ್ 150ಎನ್ಎಸ್ ಬೈಕಿನ ವಿಶೇಷತೆಗಳು
149.5 ಸಿಸಿ ಸಾಮರ್ಥ್ಯದ ಎಂಜಿನ್, 16.8 ಬ್ರೇಕ್ ಹಾರ್ಸ್ ಪವರ್ (9000 ರೌಂಡ್ಸ್ ಪರ್ ಮಿನಿಟ್), 5 ಸ್ಪೀಡ್ ಗೇರ್ ಬಾಕ್ಸ್ ವ್ಯವಸ್ಥೆಯನ್ನು ಹೊಂದಿದೆ. ಈ ಬೈಕಿನ ಒಟ್ಟಾರೆ ತೂಕ 144  ಕೆಜಿಗಳಷ್ಟಿದ್ದು, 12 ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿದೆ.

ನ್ಯೂನ್ಯತೆ
6ನೇ ಗೇರ್ ನ ಕೊರತೆಯಿಂದಾಗಿ ಬೈಕಿನ ವೇಗ ಈ ಸರಣಿಯ ಇತರೆ ಬೈಕುಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಎನ್ನಬಹುದು.

ಬೆಲೆ
ಎಕ್ಸ್ ಷೋರೂಂ ಬೆಲೆ-75,000 ರುಗಳಾಗಿದ್ದು, ವಿಮೆ, ರಸ್ತೆ ತೆರಿಗೆ, ಇತರೆ ಖರ್ಚುಗಳು ಸೇರಿ ಒಟ್ಟಾರೆ ಈ ಬೈಕಿನ ಆನ್ ರೋಡ್ ಬೆಲೆ ಸುಮಾರು 80 ಸಾವಿರ ರು.ಗಳಾಗಬಹುದು ಎಂದು ತಜ್ಞರು  ತಿಳಿಸಿದ್ದಾರೆ.

(ಮಾಹಿತಿ: ಕಾರ್ ಬ್ಲಾಗ್ ಇಂಡಿಯಾ)

SCROLL FOR NEXT