ಪ್ರವಾಸ-ವಾಹನ

ವಾಹನ ಕ್ಷೇತ್ರಕ್ಕೆ ಹಬ್ಬದ ಹರ್ಷ

Mainashree

ನವದೆಹಲಿ: ಹಬ್ಬದ ಸೀಸನ್‍ನಲ್ಲಿ ಬೇಡಿಕೆ ಹೆಚ್ಚಿದ್ದರಿಂದ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟರ್ಸ್, ಟಾಟಾ ಮತ್ತಿತರ ಕಂಪನಿಗಳ ವಾಹನಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. 

ಹೋಂಡಾ ಕಾರ್ಸ್, ಎಂಅಂಡ್‍ಎಂ ಕಂಪನಿಗಳ ವಾಹನಗಳ ಮಾರಾಟದಲ್ಲೂ ಏರಿಕೆ ಕಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿ ವಾಹನಗಳ ಮಾರಾಟ ಕಳೆದ ವರ್ಷದ ಅಕ್ಟೋಬರ್‍ಗೆ ಹೋಲಿಸಿದರೆ ಶೇ.24.7ರಷ್ಟು ಏರಿಕೆ ಕಂಡಿದೆ. ಹೊಸ ಮಾದರಿಗಳು ಮತ್ತು ಹಳೆ ಮಾದರಿಗಳ ನವೀಕರಣದಿಂದ ಹಬ್ಬದ ಸೀಸನ್‍ನಲ್ಲಿ ಮಾರಾಟ ಹೆಚ್ಚಳ ಕಂಡಿದೆ. 
ಉತ್ತಮ ಮಾರಾಟ ಕಾಣಲಿದೆ ಎಂಬ ನಿರೀಕ್ಷೆಯಿಂದಲೇ ಅಗತ್ಯ ತಯಾರಿ ನಡೆಸಿದ್ದವು ಎಂದು ಕಂಪನಿ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನಿರ್ದೇಶಕ ಆರ್.ಎಸ್. ಕಾಲ್ಸಿ ತಿಳಿಸಿದ್ದಾರೆ.
SCROLL FOR NEXT