ಪ್ರವಾಸ-ವಾಹನ

ಪವರ್ ವಿಂಡೋ ಸ್ವಿಚ್ ನಲ್ಲಿ ದೋಷ: 6 .5 ಮಿಲಿಯನ್ ಕಾರುಗಳನ್ನು ವಾಪಸ್ ಪಯಲಿರುವ ಟೊಯೋಟಾ

Srinivas Rao BV

ಟೋಕಿಯೋ: ಸಂಸ್ಥೆಯ ಕಾರುಗಳ ಪವರ್ ವಿಂಡೋ ಸ್ವಿಚ್ ನಲ್ಲಿರುವ ಸಮಸ್ಯೆಯನ್ನು ಬಗೆಹರಿಸಲು ಜಾಗತಿಕವಾಗಿ 6 .5 ಮಿಲಿಯನ್ ಕಾರುಗಳನ್ನು ವಾಪಸ್ ಪಡೆಯುವುದಾಗಿ ಟೊಯೋಟ ಹೇಳಿದೆ.
ಟೊಯೋಟದ ವಿಟ್ಜ್,  ಕೊರೊಲಾ, ಕ್ಯಾಮ್ರಿ ಸೇರಿದಂತೆ ವಿವಿಧ ಮಾದರಿಯ ಕಾರುಗಳ ಪವರ್ ವಿಂಡೋ ಸ್ವಿಚ್ ನಲ್ಲಿ ದೋಷ ಕಾಣಿಸಿಕೊಂಡಿದ್ದು, ಸರಿಪಡಿಸಲು ಗ್ರಾಹಕರಿಂದ 6 .5 ಮಿಲಿಯನ್ ಕಾರುಗಳನ್ನು ವಾಪಸ್ ಪಡೆಯಲು ಮುಂದಾಗಿದೆ.
ಈ ಪೈಕಿ 2 .7 ಮಿಲಿಯನ್ ಕಾರುಗಳು ಉತ್ತರ ಅಮೆರಿಕಾದಲ್ಲಿದ್ದು, 1 .2 ಮಿಲಿಯನ್ ಕಾರುಗಳು ಯುರೋಪ್ ಹಾಗೂ ಜಪಾನ್ ನಲ್ಲಿ 600 ,000 ಜಪಾನ್ ನಲ್ಲಿವೆ ಎಂದು ಟೊಯೋಟ ತಿಳಿಸಿದೆ. ಅಡಚಣೆಯಿಂದ ಗಂಭೀರ ಸಮಸ್ಯೆಗಳು ಎದುರಾಗಿರುವುದು ಕಂಡುಬಂದಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಉತ್ಪಾದನೆ ವೇಳೆ ಪವರ್ ವಿಂಡೋದ ಮಾಸ್ಟರ್ ಸ್ವಿಚ್ ನಲ್ಲಿರುವ ಮಾಡ್ಯೂಲ್ ಗಳನ್ನು ಸರಿಯಾಗಿ ಲೂಬ್ರಿಕೆಟ್ ಮಾಡಿಲ್ಲ, ಇದರಿಂದಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸುವ ಸಾಧ್ಯತೆ ಇದೆ ಎಂದು ಟೊಯೋಟಾ ತಿಳಿಸಿದೆ.

SCROLL FOR NEXT