ಪ್ರವಾಸ-ವಾಹನ

2015ರಲ್ಲಿ ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡಿದ 10 ರಾಜ್ಯಗಳು

Lingaraj Badiger
ನವದೆಹಲಿ: 2015ರಲ್ಲಿ ಅತಿ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡಿದ ಪ್ರಮುಖ 10 ರಾಜ್ಯಗಳ ಪೈಕಿ ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ದೆಹಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿವೆ.
ಕಳೆದ ಬಾರಿ ಆರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಈ ಬಾರಿ ಐದನೇ ಸ್ಥಾನಕ್ಕೆ ಜಿಗಿದಿದ್ದು, ರಾಜಸ್ಥಾನ ಆರನೇ ಸ್ಥಾನಕ್ಕೆ ಕುಸಿದಿದೆ. ಇನ್ನುಳಿದಂತೆ ಕೇರಳ, ಬಿಹಾರ ಹಾಗೂ ಕರ್ನಾಟಕ ಏಳು, ಎಂಟು ಹಾಗೂ ಒಂಬತ್ತನೇ ಸ್ಥಾನಪಡೆದರೆ, ಗೋವಾ 10ನೇ ಸ್ಥಾನ ಪಡೆದಿದೆ. ಆದರೆ ಈ ಬಾರಿ ಹರಿಯಾಣ ಟಾಪ್ 10 ಪಟ್ಟಿಯಿಂದ ಹೊರಗುಳಿದಿದೆ.
ಈ ವರ್ಷ ಭಾರತಕ್ಕೆ ಭೇಟಿ ನೀಡಿದ ಒಟ್ಟು ವಿದೇಶಿ ಪ್ರವಾಸಿಗರ ಪೈಕಿ ಶೇ.88ರಷ್ಟು ಪ್ರವಾಸಿಗರು ಈ ಟಾಪ್ 10 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ.
ಟಾಪ್ 10 ರಾಜ್ಯಗಳ ಪಟ್ಟಿ
1. ತಮಿಳುನಾಡು 
2. ಮಹಾರಾಷ್ಟ್ರ
3. ಉತ್ತರ ಪ್ರದೇಶ
4. ದೆಹಲಿ
5. ಪಶ್ಚಿಮ ಬಂಗಾಳ
6. ರಾಜಸ್ಥಾನ
7. ಕೇರಳ
8. ಬಿಹಾರ
9. ಕರ್ನಾಟಕ
10 ಗೋವಾ
SCROLL FOR NEXT