ಪ್ರವಾಸ-ವಾಹನ

ರಾಜ್ಯದ ಅತಿದೊಡ್ಡ ಮೃಗಾಲಯಗಳಲ್ಲಿ ಒಂದಾಗಿರುವ ಪಿಲಿಕುಳ ಜೈವಿಕ ಉದ್ಯಾನವನ

Sumana Upadhyaya
ಮಂಗಳೂರು: ಕೆಲ ದಿನಗಳ ಹಿಂದೆ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿಗಳ ಕುಟುಂಬಕ್ಕೆ 6 ವರ್ಷದ ಕಾವೇರಿ ಸೇರಿಕೊಂಡಾಗ ಅಲ್ಲಿ ಸಂಭ್ರಮ ಉಂಟಾಯಿತು. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಬಂದ ಕಾವೇರಿ ಎಂಬ ನೀರು ಕುದುರೆ(hippopotamus)ಯನ್ನು ನೀರಿಗೆ ಹಾಕಿದ್ದು, ಅದಕ್ಕಾಗಿ ಪ್ರತ್ಯೇಕ ನೀರಿನ  ನೀರಿನ ಕೇಂದ್ರವನ್ನು ಸೃಷ್ಟಿ ಮಾಡಲಾಗಿದೆ.
ಹಲವು ವೈವಿಧ್ಯ ಪ್ರಾಣಿ-ಪಕ್ಷಿಗಳಿಂದಾಗಿ ಇಂದು ಮಂಗಳೂರಿನ ಪಿಲಿಕುಳ ಮೃಗಾಲಯ ರಾಜ್ಯದಲ್ಲಿಯೇ ಪ್ರಮುಖವಾಗಿದೆ. 
ಪಶ್ಚಿಮ ಕರಾವಳಿ ಘಟ್ಟದ ತಪ್ಪಲಿನಲ್ಲಿರುವ ಪಿಲಿಕುಳಕ್ಕೆ ಆ ಹೆಸರು ಬರಲು ಕಾರಣ ತುಳು ಭಾಷೆಯಲ್ಲಿ ಪಿಲಿ ಎಂದರೆ ಹುಲಿ ಮತ್ತು ಕುಳ ಎಂದರೆ ಸರೋವರ ಎಂದರ್ಥ. ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಪಿಲಿಕುಳ ನಿಸರ್ಗ ಧಾಮ ಸೊಸೈಟಿ. ಇದರ ಮುಖ್ಯ ಆದಾಯ ಸಿಎಸ್ಆರ್ ಪ್ರಾಯೋಜಕತ್ವ, ಗೇಟುಗಳಲ್ಲಿ ಹಣ ಸಂಗ್ರಹ ಮತ್ತು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವುದಾಗಿದೆ. 
ನಮ್ಮ ಮೃಗಾಲಯ ಇಷ್ಟೊಂದು ಕೀರ್ತಿ ಬರಲು ದಕ್ಷಿಣ ಕನ್ನಡ ಜನತೆಯೇ ಕಾರಣ. ಜನರ ನಿರಂತರ ಸಹಕಾರ ನಮಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಕೂಡ ಸಹಾಯ ಮಾಡುತ್ತಾರೆ ಎನ್ನುತ್ತಾರೆ ಶಾಸಕ ಜೆ.ಆರ್.ಲೊಬೊ. ಅವರು ನಿಸರ್ಗಧಾಮದ ಮೊದಲ ಕಾರ್ಯಕಾರಿ ನಿರ್ದೇಶಕರು ಮತ್ತು ಮಂಗಳೂರು ನಗರ ಪಾಲಿಕೆಯ ಅಂದಿನ ಆಯುಕ್ತರಾಗಿದ್ದಾರೆ.
ಪಿಲಿಕುಳದಲ್ಲಿ 1200 ಪ್ರಾಣಿಗಳು ಮತ್ತು 125 ವೈವಿಧ್ಯ ಪ್ರಬೇಧಗಳ ಪಕ್ಷಿಗಳು ಇವೆ. ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇಲ್ಲಿನ ಎರಡು ಆನೆಗಳಾದ ದುರ್ಗಾಪರಮೇಶ್ವರಿ ಮತ್ತು ಪ್ರಶಾಂತ ಮೈಸೂರಿನ ದಸರಾ ಜಂಬೂ ಸವಾರಿಯಲ್ಲಿ ಪ್ರತಿವರ್ಷ ಭಾಗವಹಿಸುತ್ತವೆ. ಪಿಲಿಕುಳ ದೇಶದಲ್ಲಿಯೇ ಮೊದಲ ಕಿಂಗ್ ಕೋಬ್ರಾ ತಳಿಯ ಕೇಂದ್ರವಾಗಿದೆ. ವರ್ಷಕ್ಕೊಮ್ಮೆ ಶಾಲಾ ಮಕ್ಕಳಿಗೆ ವನ್ಯಮೃಗಗಳ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎನ್ನುತ್ತಾರೆ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ.
SCROLL FOR NEXT