ಪ್ರವಾಸ-ವಾಹನ

ಹ್ಯುಂಡೈನ ಅತ್ಯಂತ ಯಶಸ್ವೀ ಕಾರು ಐ10 ತಯಾರಿಕೆ ಭಾರತದಲ್ಲಿ ಸ್ಥಗಿತ, ಹೊಸ ಸ್ಯಾಂಟ್ರೋದತ್ತ ಸಂಸ್ಥೆಯ ಚಿತ್ತ!

Srinivasamurthy VN

ನವದೆಹಲಿ: ಹ್ಯುಂಡೈ ಸಂಸ್ಥೆಯ ಅತ್ಯಂತ ಯಶಸ್ವೀ ಕಾರುಗಳನ್ನು ಒಂದಾದ ಐ10 ಸರಣಿಯ ಕಾರುಗಳ ತಯಾರಿಕೆ ಭಾರತದಲ್ಲಿ ಇನ್ನು ಸ್ಥಗಿತವಾಗಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಹ್ಯುಂಡೈ ಸಂಸ್ಥೆ ತನ್ನ ಹೊಸ ಸ್ಯಾಂಟ್ರೋ ಕಾರುಗಳನ್ನು 2018ರ ವೇಳೆಗೆ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿಕೊಂಡಿದ್ದು, ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಯಶಸ್ವಿ ಮಾರಾಟವಾಗುತ್ತಿರುವ ಐ10 ಸರಣಿಯ ಕಾರುಗಳನ್ನು  ಭಾರತದಲ್ಲಿ ತಯಾರಿ ಮಾಡದಿರುವ ಸಂಸ್ಥೆ ನಿರ್ಧರಿಸಿದೆ. ಹೊಸ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತು ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಮುಂದುರೆಸುವ ಕಾರಣದಿಂದಾಗಿ ಸಂಸ್ಥೆ ಈ ದಿಟ್ಟ ನಿರ್ಧಾರಕ್ಕೆ ಬಂದಿದೆ ಎಂದು  ಹೇಳಲಾಗುತ್ತಿದೆ.

ಹೊಸ ವಿನ್ಯಾಸದ ಐ10 ಕಾರುಗಳಿಗಳಿಗೆ ಭಾರತದಲ್ಲಿ ಹೆಚ್ಚು ಬೇಡಿಕೆ ಇದ್ದು, ಬೇಡಿಕೆ ಇರುವಾಗಲೇ ಹ್ಯುಂಡೈ ಸಂಸ್ಥೆ ಈ ಸರಣಿಯ ಕಾರುಗಳ ತಯಾರಿಕೆಯನ್ನು ಸ್ಥಗಿತಗೊಳಿಸುತ್ತಿರುವುದು ಅಚ್ಚರಿ ಮೂಡಿಸಿದೆ. 2007ರಲ್ಲಿ  ಮಾರುಕಟ್ಟೆಗೆ ಆಗಮಿಸಿದ್ದ ಐ10 ಕಾರಿಗೆ 2013ರಲ್ಲಿ ಹೊಸ ವಿನ್ಯಾಸ ನೀಡಿ ಐ10 ಗ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆ ಮತ್ತೆ ಬಿಡುಗಡೆ ಮಾಲಾಗಿತ್ತು. ಹಳೆಯ ಐ10 ಕಾರುಗಳಿಗಿಂತಲೂ ಐ10 ಗ್ರ್ಯಾಂಡ್ ಹೆಚ್ಚಾಗಿ ಗ್ರಾಹಕರ ಪ್ರಶಂಸೆ  ಗಿಟ್ಟಿಸಿತ್ತು. ಮಾರುಕಟ್ಟೆಗೆ ಆಗಮಿಸಿದ ದಿನದಿಂದ ಈ ವರೆಗೂ ಸುಮಾರು 16.95 ಲಕ್ಷ ಕಾರುಗಳು ಮಾರಾಟವಾಗಿದ್ದವು. ಈ ಸಂಖ್ಯೆಯೇ ಕಾರಿನ ಯಶಸ್ಸನ್ನು ಸಾರುತ್ತದೆ.

ಇದೇ ಯಶಸ್ಸಿನ ಬೆನ್ನಲ್ಲೇ ಸಂಸ್ಥೆ ಐ20 ಕಾರನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿತ್ತು, ಅದೂ ಕೂಡ ಯಶಸ್ವಿಯಾಗಿತ್ತು. ಹೀಗಿದ್ದೂ ಭವಿಷ್ಯದ ಯೋಜನೆಗಳ ಕುರಿತು ಚಿಂತನೆ ಹರಿಸಿರುವ ಹ್ಯುಂಡೈ ಸಂಸ್ಥೆ 2017ರಿಂದ 2020ರ ವರೆಗೂ  ಸುಮಾರು 8 ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ನಿರ್ಧರಿಸಿದ್ದು, ಇದೇ ಕಾರಣಕ್ಕೆ ಐ10 ಸರಣಿ ಕಾರುಗಳ ತಯಾರಿಕೆಯನ್ನು ಹ್ಯುಂಡೈ ಸಂಸ್ಥೆ ಸ್ಥಗಿತಗೊಳಿಸುತ್ತಿದೆ. ಇಕೋ ಫ್ರೆಂಡ್ಲಿ ಅಧಾರದ ಮೇಲೆ ಈ  ಕಾರುಗಳು ತಯಾರಾಗುತ್ತಿದ್ದು, ಕನಿಷ್ಠ ಹೊಗೆ ಮತ್ತು ಗರಿಷ್ಠ ಸೇವೆ ಯೋಜನೆಯಡಿಯಲ್ಲಿ ಈ ಕಾರುಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

SCROLL FOR NEXT