ಪ್ರವಾಸ-ವಾಹನ

ದೇಶೀ ವಾಹನ ಮಾರುಕಟ್ಟೆ: ಕಾರು ಮಾರಾಟ ಶೇ.7, ಸಾರಿಗೆ ವಾಹನ ಮಾರಾಟ ಶೇ 11ರಷ್ಟು ಹೆಚ್ಚಳ

Raghavendra Adiga
ನವದೆಹಲಿ: ದೇಶೀಯ ವಾಹನ ಮಾರುಕಟ್ಟೆಯಲ್ಲಿ, ಪ್ರಯಾಣಿಕರ ವಾಹನ ಮಾರಾಟ ಪ್ರಮಾಣ ಶೇ 11.32 ರಷ್ಟು ಏರಿಕೆ ಕಂಡಿದೆ. ಸೆಪ್ಟೆಂಬರ್ ನಲ್ಲಿ ಒಟ್ಟು 3,09,955 ಪ್ರಯಾಣಿಕರ ವಾಹನಗಳು ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,78,428 ವಾಹನಗಳು ಮಾರಾಟವಾಗಿದ್ದವು.
ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ 1,95,259 ಕಾರು ಮಾರಾಟ ಆಗಿದ್ದು ಈ ಬಾರಿ ಕಾರ್ ಮಾರಾಟದಲ್ಲಿ ಶೇ.6.86 ರಷ್ಟು ಏರಿಕೆ ಕಂಡಿದೆ. ಈ ಸಪ್ಟೆಂಬರ್ ಮಾಹೆಯಲ್ಲಿ ಒಟ್ಟು 2,08,656 ಕಾರುಗಳು ಮಾರಾಟವಾಗಿದೆ. ಭಾರತೀಯ ಆಟೊಮೊಬೈಲ್ ತಯಾರಕರ ಸೊಸೈಟಿ (ಎಸ್ಐಎಎಂ) ಬಿಡುಗಡೆಗೊಳಿಸಿದ ಅಂಕಿ ಅಂಶಗಳಲ್ಲಿ ಈ ಮೇಲಿನ ವಿವರ ಲಭ್ಯವಾಗಿದೆ.
ಮೋಟಾರ್ ಸೈಕಲ್ ಮಾರಾಟ ಕಳೆದ ತಿಂಗಳು ಶೇ. 6.98 ರಷ್ಟು ಏರಿಕೆಯಾಗಿ 12,69,612 ಗೆ ತಲುಪಿದೆ. ಸೆಪ್ಟೆಂಬರ್ 2016 ರಲ್ಲಿ 11,86,759 ಮೋಟಾರ್ ಸೈಕಲ್ ಮಾರಾಟವಾಗಿದ್ದವು.
ಸಪ್ಟೆಂಬರ್ ನಲ್ಲಿ ಒಟ್ಟು ದ್ವಿಚಕ್ರ ವಾಹನ ಮಾರಾಟ ಶೇ. 9.05 ರಷ್ಟಿದ್ದು  20,41,024 ವಾಹನಗಳು ಮಾರಾಟವಾಗಿವೆ.  ಕಳೆದ ವರ್ಷ ಈ ಅವಧಿಯಲ್ಲಿ 18,71,621 ದ್ವಿಚಕ್ರ ವಾಹನಗಳನ್ನು ಮಾರಾಟ ಮಾದಲಾಗಿತ್ತು.
ಇದೇ ವೇಳೆ ವಾಣಿಜ್ಯ ವಾಹನಗಳ ಮಾರಾಟ ಶೇ 25.27 ರಷ್ಟು ಏರಿಕೆ ದಾಕಲಿಸಿದೆ. ಸೆಪ್ಟೆಂಬರ್ ನಲ್ಲಿ 77,195 ವಾಣಿಜ್ಯೋದ್ದೇಶದ ವಾಹನಗಳು ಮಾರಾಟವಾಗಿದೆ.
ಹೀಗೆ ಎಲ್ಲಾ ವಿಧದ ವಾಹನ ಮಾರಾಟವನ್ನು ಗಣನೆಗೆ ತೆಗೆದುಕೊಂಡಲ್ಲಿ  ಶೇ. 10 ರಷ್ಟು ಹೆಚ್ಚಳವಾಗಿದ್ದು, ಕಳೆದ ತಿಂಗಳು 24,90,034 ವಾಹನಗಳು ಮಾರಾಟವಾಗಿವೆ. 2016 ರ ಈ ಅವಧಿಯಲ್ಲಿ 22,63,620 ವಾಹನಗಳು ಮಾರಾಟ ಕಂಡಿದ್ದವು.
SCROLL FOR NEXT