ಪ್ರವಾಸ-ವಾಹನ

ಎಂಜಿ ಮೋಟಾರ್ ಇಂಡಿಯಾದ ಮೊದಲ ಕಾರು ರಹಿತ ಶೋರೂಂ ಬೆಂಗಳೂರಿನಲ್ಲಿ ಆರಂಭ

Lingaraj Badiger

ಬೆಂಗಳೂರು: ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ತನ್ನ ಮೊದಲ ಕಾರು ರಹಿತ ಶೋರೂಂ ‘ಡಿಜಿಟಲ್ ಸ್ಟುಡಿಯೋ’ ಅನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.

ಇದೊಂದು ವಿನೂತನವಾದ ಶೋರೂಂ ಆಗಿದ್ದು ಇಲ್ಲಿ ಕಾರುಗಳು ಇರುವುದಿಲ್ಲ, ಬದಲಿಗೆ ಹೆಕ್ಟರ್ ಕಾರಿನ ಬಗ್ಗೆ ವಿಶಿಷ್ಟ ದೃಶ್ಯಗಳ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತದೆ.

ಎಂಜಿ ಮೋಟಾರ್ ಇಂಡಿಯಾದ ಮೊದಲ ‘ಡಿಜಿಟಲ್ ಸ್ಟುಡಿಯೋ’ ಸಾಂಪ್ರದಾಯಿಕ ಆಟೋಮೊಬೈಲ್ ಶೂರೂಂ ಮಾದರಿಯಲ್ಲಿ ಇರುವುದಿಲ್ಲ. ಇದೊಂದು ಮುಂದಿನ ಪೀಳಿಗೆಯ ಆಟೋಮೊಬೈಲ್ ಚಿಲ್ಲರೆ ಮಾರಾಟಕ್ಕೆ ನಾಂದಿಯಾಗಲಿದೆ.

ಸಾಂಪ್ರದಾಯಿಕ ಶೋರೂಂಗಳ ನಿರ್ವಹಣೆ ಇಂದಿನ ದಿನಗಳಲ್ಲಿ ಬಹಳ ಕಷ್ಟ. ಕಾರಣ ದುಬಾರಿ ಬಾಡಿಗೆ ಜತೆಗೆ ಕಾರುಗಳನ್ನು ಇಡಲು ಜಾಗದ ಕೊರತೆ ಕೂಡ ಇರುತ್ತದೆ. ಆದರೆ ಈ ಡಿಜಿಟಲ್ ಸ್ಟುಡಿಯೋದಲ್ಲಿ ಈ ಥರದ ಸಮಸ್ಯೆಗಳೇ ಇರುವುದಿಲ್ಲ. ಬಹಳ ಸುಲಭವಾಗಿ ನಿರ್ವಹಣೆ ಕೂಡ ಮಾಡಬಹುದು ಮತ್ತು ಡಿಜಿಟಲ್ ರೂಪದಲ್ಲಿ ಗ್ರಾಹಕರಿಗೆ ಕಾರುಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.

“ಈ ಮೊದಲ ಡಿಜಿಟಲ್ ಸ್ಟುಡಿಯೋ ಒಂದು ಪೈಲಟ್ ಪ್ರಾಜೆಕ್ಟ್. ಕಾರುಗಳನ್ನು ಶೋರೂಂನಲ್ಲಿ ಇಡದೆ ಭವಿಷ್ಯದ ಆಟೋಮೊಬೈಲ್ ಚಿಲ್ಲರೆ ಮಾರಾಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮುಂದಿನ ಪೀಳಿಗೆಗೆ ಈ ಥರದ ಶೋರೂಂಗಳು ಆಟೋಮೊಬೈಲ್ ಕ್ಷೇತ್ರದಲ್ಲಿ ನೆಟ್ ವರ್ಕ್ ಮಾಡಲು ಸಹಕಾರಿ ಎನ್ನುವ ವಿಶ್ವಾಸ ನಮ್ಮದು” ಎಂದು ಮೊದಲ ಡಿಜಿಟಲ್ ಸ್ಟುಡಿಯೋ ಉದ್ಘಾಟಿಸಿದ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಅವರು ಹೇಳಿದ್ದಾರೆ.

SCROLL FOR NEXT