ನನ್ನ ಪ್ರೇಮ ಕಥೆ

ಫಿಸಿಕಾಲಜಿ ಅಲ್ಲಲ್ಲಾ ಸಾರಿ ಸೈಕಾಲಜಿ

ಕಾಲೇಜ್ನಲ್ಲಿ ಮಾತಿನಮಲ್ಲಿಯಾಗಿದ್ದ ನನಗೆ ಚಾಟರ್ ಬಾಕ್ಸ್ ಅಂತಾ ನಾಮಕರಣ ಮಾಡಿದವ ನನ್ನ ಸ್ಟಡೀಸ್ ಬಗ್ಗೆ ವಿಚಾರಿಸಿ

ಹುಡುಗಿಗೆ 18 ವರ್ಷ ತುಂಬ್ತು ಅಂದ್ರೆ ಮುಗೀತು ಮದುವೆ ಅನ್ನೋ ಬಂಧನದಲ್ಲಿ ಕಟ್ಟಾಕೋ ಹೊಂಚಲ್ಲಿ ಹಿರಿಯರು ತುದಿಗಾಲ ಮೇಲೆ ನಿಂತಿರ್ತಾರೆ...

ಇದರಿಂದ ನಾನೂ ಏನೂ ಬಚಾವಾಗಲಿಲ್ಲ ಆದ್ರೆ ಸ್ವಲ್ಪ ಖುಷಿ ವಿಚಾರ ಅಂದ್ರೆ ನನಗೆ 18 ದಾಟಿ ನಾಲ್ಕು ವರ್ಷ ಆಗಿತ್ತು. ಅವತ್ತೊಂದು ಬಾನುವಾರದ ದಿನ ಕಾಲೇಜ್ಗೆ ರಜೆ ಬೇರೆ ಇದ್ದಿದರಿಂದ ಹಾಯಾಗಿ ನಿದ್ದೆ ಮಾಡಿ ಕಾಲ ಕಳೆಯೋಣ ಅಂತ ಪ್ಲ್ಯಾನ್ ಮಾಡಿದ್ದ ನನ್ನ ಮನಸ್ಸಿಗೆ ಆಘಾತನೂ ಕಾದಿತ್ತು. ಇದ್ದಕ್ಕಿದ್ದಂತೆ ಅಮ್ಮ ಆತುರದಲ್ಲಿ ಬಂದು ನನ್ನ ಕೋಣೆಯೋಳಗೆ ಕರ್ಕೊಂಡ ಹೋಗಿ ಕಬರ್ಡನಲ್ಲಿದ್ದ ರೇಷ್ಮೆ ಸೀರೆಯೊಂದನ್ನ ನನಗೆ ಉಡಸೋಕ ಶುರುಮಾಡಿದ್ರು ಯಾಕಮ್ಮ ಇದೆಲ್ಲಾ ಅಂತಾ ಕೇಳಿದ್ರೆ ನಿನ್ನ ನೋಡೊಕೆ ಯಾವುದೋ ಹುಡುಗನ ಮನೆಯವರು ಬರ್ತೀದಾರಂತೆ ಸುಮ್ನೆ ಏನೂ ಮಾತಾಡ್ದೆ ರೆಡಿಯಾಗು ಅಷ್ಟೇ ಅಂತಾ ಅಮ್ಮ ಸೀರೆ ಊಡ್ಸಿ, ತಲೆಗೆ 2 ಮೊಳ ಹೂವು ಮೂಡ್ಸಿ ರೆಡಿ ಮಾಡಿ ಕೂರಸಿದ್ರು.

ನನಗೆ ಆಕಾಶ ತಲೆಮೇಲೆ ಕಳಚಿ ಬಿದ್ದಾಂಗಾಗಿತ್ತು. ಏಜುಕೇಷನ್ ಅನ್ನೋ ಪದ ಕೂಡ ಗಾಳಿಗೆ ತೂರೋದೆ ಇವಾಗ ಅನ್ಸತು. ಮನೇಲಿ ಅಜ್ಜಿ ನಿಧರ್ಾರನೇ ಕೊನೆ ಅಜ್ಜಿಗೆ ಇರೋ ನನ್ನೊಬ್ಬಳನ್ನ ಮದುವೆ ಮಾಡಿ ಶಿವನ ಪಾದ ಸೇರಬೇಕಿತ್ತಂತೆ ಅದಕ್ಕೆ ನಾನು ಹರೆಕೆ ಕುರಿಯಾಗಿದ್ದೆ. ಅಜ್ಜಿ ನಿಧರ್ಾರನೇ ಕೊನೆ ಆದ್ದರಿಂದ ಮನೇಲಿ ಬೇರೆಯವರ ಮಾತಿಗೆ ಏನೂ ಸೊಪ್ಪೆ ಹಾಕೋ ಹಾಗೇ ಇರಲಿಲ್ಲ. ಇನ್ನು ನನ್ನ ಮಾತು ಅಂತೂ ದೇವರಿಗೆ ಪ್ರಿಯ. ಕಣ್ಣಿಂದ ಕಣ್ಣೀರಧಾರೆ ಹರಿತಿತ್ತು ಊಹೂ ಆದ್ರೂ ಯಾರು ಕ್ಯಾರೆ ಅನ್ನೋ ಹಾಗಿರಲಿಲ್ಲ. ಇಷ್ಟ ಇಲ್ದಿದ್ರೂ ಬಂದ ವರಮಹಾಶಯನ ಮುಂದೆ ತಲೆ ತಗ್ಗಿಸಿ ಕೂತ್ಕೊಳ್ಳೆ ಬೇಕಿತ್ತು. ಕೂತ್ಕೊಂಡೆ..

ನೀರರ್ಗಳವಾಗಿ ಮಾತಗಳು ಬರ್ತೋವೋ ಇಲ್ಲವೋ ಅಂತಾ ಮಾತಿನ ಪರೀಕ್ಷೆ, ಕೈ ಪರೀಕ್ಷೆ ಅಂತಾ ಏನೇನೋ ಪರೀಕ್ಷೆಗಳಂತಾ ಪಿಯುಸಿ ಬೋರ್ಡ ಎಕ್ಸಾಮ್ನಲ್ಲೋ ಟೆನ್ಶನ್ ಆಗ್ದೆ ಇರೋಳಗೆ ಇದೊಂದು ದೊಡ್ಡ ಅಗ್ನಿ ಪರೀಕ್ಷೆನೇ ಅನ್ಸತು. ಭಯನೋ ಅಥವಾ ಟೆನ್ಸನ್ನಗೋ ಗೊತ್ತಿಲ್ಲ ವರ ಮಹಾಶಯನನ್ನ ತಲೆ ಎತ್ತಿ ನೋಡೋ ಪ್ರಯತ್ನ ನಾನು ಮಾಡಿರಲಿಲ್ಲ.  
ಆಮೇಲೆ ಉಸ್ಸಪ್ಪ ಅಂತಾ ಊಸರಬಿಟ್ಟು ನೆಮ್ಮದಿಯಿಂದ ಕೂತ್ಕೊಳೋಣ ಅಂದ್ರೆ ಅಮ್ಮ ಬಂದೋರಗೆ ಅತಿಥಿ ಸತ್ಕಾರ ಮಾಡು ಅಂತಾ ಕೈಗೆ ಕಾಫಿ ಮತ್ತು ಸ್ನಾಕ್ಸ್ ಟ್ರೇ ಇಟ್ರು ಒಳ್ಗೊಳಗೆ ಇವಾಗ ಈ ಸರ್ವರ್ ಕೆಲ್ಸ್ ಬೇರೆ ಮಾಡಬೇಕಾ ಅಂತಾ ಮನ್ಸಲ್ಲೇ ಮೂಗ ಮೂರಕೊಂಡು ತಲೆ ಕೆಳಗಾಕಿ ಕಾಫಿ ಸರ್ವ ಮಾಡಿದ್ದು ಆಯ್ತು.

ಇನ್ನೇನು ಎಲ್ಲಾ ಮುಗ್ದೋಯ್ತು ನೆಮ್ಮದಿಯಿಂದ ಕೂತ್ಕೊಳಣ ಅಂದ್ರೆ ವರಮಹಾಶಯ ಹುಡುಗಿ ಜೊತೆ ಸ್ವಲ್ಪ ಮಾತಾಡಬೇಕಿತ್ತು ಅಂತಾ ಬೇಡಿಕೆ ಇಟ್ಟಿದ್ದೆ ತಡ. ಅಮ್ಮ ಬಂದು ಸುಮ್ನೆ ನಿನಿಗೆ ಇಷ್ಟಾ ಇಲ್ಲಾ ಅದು ಇದೂ ಅಂತ ಏನೂ ಮಾತಾಡಬೇಡ ಸುಮ್ನೆ ಹೋಗಿ ಕೂತ್ಕೊಂಡಿರು ಅಂತಾ ಕಿವಿ ಹಿಂಡಿ ರೂಮಗೆ ಕಳ್ಸಿದ್ರು.

ಯಪ್ಪಾ...ಹಸುಗೂಸ ಒಂದನ್ನ ಎರದು ಮಲಗಿಸಿರೋ ಹಾಗೆ ರೂಮ್ ಸ್ತಬ್ಧವಾಗಿತ್ತು ನಾನು ಸೋಫಾ ಮೇಲೆ ಕೂತ್ಕೊಂಡಿದ್ದೆ ತಡ ಆ ಕಡೆಯಿಂದ ನೆರಳು ಬಿದ್ದಿದ್ದೆ ಕಾಣ್ಸತು ಎದೆ ಒಂದೇ ಸಮ ಡವ ಡವ ಹೋಡ್ಕೋಳಕೆ ಶುರುಮಾಡಿತ್ತು. ಆ ಹುಡ್ಗ ಬಂದು ನನ್ನ ಪಕ್ಕದಲ್ಲಿ ಸ್ವಲ್ಪ ದೂರದಲ್ಲೇ ನಿಂತ್ಕೊಂಡ..ರೂಮ್ ಕೆಲ ನಿಮಿಷ ಫುಲ್ ಸೈಲೆಂಟು. 'ಯಾವಾಗಿಂದ ಈ ಚಾಟರ್ ಬಾಕ್ಸ್ ಈ ರೇಂಜ್ಗೆ ಸೈಲೆಂಟ್ ಮೋಡ್ಗೆ ಟರ್ನ ಆಗಿದ್ದು' ಅಂತ ಧ್ವನಿ ಕೇಳಸ್ತು, ಇದೇನಪ್ಪ ನನ್ನ ಕಾಲೇಜ್ಲ್ಲಿಟ್ಟಿರೋ ಪೆಟ್ ನೇಮ್ ಇಲ್ಲಿ ಹೇಗೆ ಅಂತ ಕತ್ತು ಎತ್ತಿ ನೋಡಿದ್ರೆ ನಾನೊಂದ ಕ್ಷಣ ಫುಲ್ ಶಾಕು.

ಅದೇ ನನ್ನ ಕಾಲೇಜ್ ಸೂಪರ್ ಸಿನಿಯರ್ಸ್ ಗ್ಯಾಂಗ್ ನಾನು ಫಸ್ಟ್ ಡೇ ಫಸ್ಟ್ ಕ್ಲಾಸ್ ಫಿಸಿಕಾಲಜಿ..ಅಲ್ಲಲ್ಲಾ ಸಾರಿ ಸೈಕಾಲಜಿ ಕ್ಲಾಸ್ಗೆ ಹೋಗಬೇಕಾದ್ರೆ ಅಡ್ಡಗಟ್ಟಿ ರ್ಯಾಗ್ ಮಾಡಿ ಗೊಳಯ್ಕೊಂಡಿದ್ದರು. ಯಾವ ಕ್ಲಾಸ್ ಇದೆ ಅಂತ ಕೇಳಿದ್ರೆ ಸೈಕಾಲಜಿಗೆ ಫಿಸಿಕಾಲಜಿ ಅಂತ ಅಂದಿದ್ದ ನನ್ನ ಪೆದ್ದು ಉತ್ತರಕ್ಕೆ ಗ್ಯಾಂಗ್ ಫುಲ್ ಲೋಲ್(LOL) ನಲ್ಲಿ ಮಿಂದೆದ್ದಿತ್ತು. ಆ ಪೆದ್ದು ಉತ್ತರ ಕೊಟ್ಟು ಓರೆ ನೋಟದಲ್ಲಿ ಕತ್ತೆತ್ತಿ ನೋಡ್ದಾಗ ಗುಂಪಲ್ಲಿ ಸೈಲೆಂಟಾಗಿ ಒಂದು ಚಿಕ್ಕ ಸ್ಮೈಲ್ನಿಂದ ಮನಸ್ಸಲ್ಲಿ ಕ್ರಶ್ ಮೂಡ್ಸಿದ್ದ ಆ ಹುಡುಗ ಇವತ್ತು ಮನೇಲಿ ನನ್ನ ಎದುರಿಗೆ ಬಂದು ನಿಂತಾಗ ಅಬ್ಬಾ ಒಳಗೊಳಗೆ ಸಂತೋಷ ಜಾಸ್ತಿಯಾಗ್ತಿತ್ತು. ಅಬ್ಬಾ ಅಷ್ಟೋತ್ತು ಆತಂಕದ ಸು ಳಿಯಲ್ಲಿ ಸಿಕ್ಕಿದ್ದ ನನಗೆ ಅವನನ್ನ ನೋಡಿ ಖುಷಿ ಅಲೆಯಲ್ಲಿ ತೇಲಾಡ್ತಿದ್ದೆ.

ಕಾಲೇಜ್ನಲ್ಲಿ ಮಾತಿನಮಲ್ಲಿಯಾಗಿದ್ದ ನನಗೆ ಚಾಟರ್ ಬಾಕ್ಸ್ ಅಂತಾ ನಾಮಕರಣ ಮಾಡಿದವ ನನ್ನ ಸ್ಟಡೀಸ್ ಬಗ್ಗೆ ವಿಚಾರಿಸಿ ನನ್ನ ವರೀಸ್ ದೂರ ಮಾಡಿದ ಆತನ ಮಾತುಗಳಿಗೆ ಫುಲ್ಸ್ಟಾಪ್ ಹಾಕೋ ಟೈಮಲ್ಲಿ.. ಲೈಫ್ಲಾಂಗ್ ನನ್ನ ಜೊತೆ ಇರ್ತೀಯಾ ಅಂತ ಕೈಗೆ ಹೂ ಮುತ್ತಿಟ್ಟ ನಾನು ನಾಚಿ ನೀರಾಗಿದ್ದೆ.

ಸುರಿಲಿ ಎಚ್.ಪಿ.
ಹುಬ್ಬಳ್ಳಿ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT