ನಮ್ಮ ಪ್ರೀತಿಗೆ ವಯಸ್ಸು 7ವರ್ಷ 362ದಿನ ಇನ್ನೂ 3 ದಿನಾ ಕಳೆದಿದ್ರೆ ಬರೋಬ್ಬರಿ 8ವರ್ಷ. ಕಾಲೇಜಿಗೆ ಬರೋವಾಗ ಕೂಡಿದ ಪ್ರೀತಿ ನಮ್ದು ಆದರೆ ಅವಳೀಗ ಯುನಿವರ್ಸಿಟಿಲಿ media ವಿಭಾಗದಲ್ಲಿ PG ಅದಕ್ಕೀಗ ನಾನಂದ್ರೆ lazy.
ಈ ವರ್ಷ ಪ್ರೇಮಿಗಳ ದಿನಾಚರಣೆಗೆ ಕಾಲ್ಳೆಜ್ಜೆ ಗಿಫ್ಟ್ ಕೊಡೋಣಾ ಎಂದ್ರೆ ಅವಳಿಗು-ನಂಗೂ ಜಗಳ ಪೋನ್ ಯಾಕ್ ರಿಸಿವ್ ಮಾಡಲ್ಲ ಅಂತಾ. ಹೋಗ್ಲಿ sorry ಕೇಳಿ Comprmise ಆಗಲಿಕ್ಕೆ ನಮ್ಮ ಮಾಮೂಲಿ ಜಾಗಕ್ಕೆ ಕರೆದ್ರೆ 'ನಂಗೆ ಟೈಮಿಲ್ಲ, ನಮ್ಮ media ಆಫೀಸಿಗೆ ಹೋಗ್ಬೇಕು, but one condition ನಾ ಮನೇಲಿದ್ದಾಗ ಪೋನ್ ಮಾಡಬೇಡಿ, ನಾ ರಿಸಿವ್ ಮಾಡಿದರೆ ಮಾತಾಡಿ ಇಲ್ಲಾಂದ್ರೆ ಇಲ್ಲಾ ಮತ್ತೆ ನಾ ಕ್ಯಾಮರ್ಮನ್ ಜೊತೆ ನಮ್ಮ media ಸರ್ ಜೊತೆ ಬೈಕಲ್ಲಿ ಹೋದ್ರೆ ಡೌಟ್ ಪಡಬೇಡಿ ನಮ್ಮ media ಫೀಲ್ಡ ಇರೋದೆ ಹಾಗೆ. ಅಂತಾ ಕಡ್ಡಿ ಮುರಿದ್ಹಾಗೆ ಹೇಳಿ ನನ್ನ ಗಿಫ್ಟ್ನ್ನೂ ನನ್ನನ್ನೂ ಅಲ್ಲಿಯೇ ಏಕಾಂಗಿಯಾಗಿ ಬಿಟ್ಟು ಹೋದ್ಲು.
7ವರ್ಷಗಳ ಕಾಲ ನೀನಂದ್ರೆ ನಂಗೆ ಪ್ರಾಣ ಕಣೋ, ನೀನಿಲ್ಲದೇ ನಂಗೆ ಬದುಕಾಕಗಲ್ಲ,ಪೋನ್ ಮಾಡಿದ್ರೆ ಪ್ಲೀಸ್ ರೀಸಿವ್ ಮಾಡು ಎರಡೇ ಎರಡು ಮಾತಾಡು msg me,call me,ki…me ಎನ್ನುತ್ತಿದ್ದವಳು ಇದೀಗ don’t call me, don’t touch me ಅಂತಾ ಹೇಳಿದ್ದು ಕೇಳಿ ಅಳುತ್ತಾ ಅಲ್ಲಿಯೇ ಕುಳಿತೆ ಗಾರ್ಡನ್ ವಾಚ್ಮನ್ ಬಂದು ಸೀಟಿ ಹಾಕಿದಾಗ ಭಾರವಾದ ಮನಸ್ಸು ಹೊತ್ತು ಮನೆಗೆ ನಡೆದೆ. ನನ್ನಲ್ಲಿ ಉಳಿದ ಆ ಕಾಲ್ಗೆಜ್ಜೆಗೆ ಫೆ.14ಕ್ಕೆ I love you ಹೇಳೋಣ ಅಂತಿದೀನಿ. ಆದ್ರೆ ಈ ಲವ್ಗಿಂತ career ಮುಖ್ಯ ಅಂತಾ ತಿಳಿಸಿಕೊಟ್ಟ ಆಕೆಗೆ ಥ್ಯಾಂಕ್ಸ್.
-ರಾಜು.ಬಿ.ಬಿ.,ಹುಬ್ಬಳ್ಳಿ