ಒಂದೇ ದಿನ ರಾತ್ರಿ 52 ಮಿಮೀ ಮಳೆ: ಮಿಂದು ತೇಲಾಡಿದ ಬೆಂಗಳೂರು!
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ 52 ಮಿಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಳಗಿನ ಜಾವ ಮಳೆಯಲ್ಲೇ ವಾಹನ ಸವಾರರು ತಮ್ಮ ಕಚೇರಿ ಹಾಗೂ ದಿನನಿತ್ಯದ ಕೆಲಸದ ಸ್ಥಳಗಳಿಗೆ ತೆರಳಿದರು. ವಾಹನಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿ ಸಂಚಾರಕ್ಕೆ ಹರಸಾಹಸ ಪಟ್ಟವು.