ಫೆಂಗಲ್ ಚಂಡಮಾರುತದಿಂದಾಗಿ ಭಾನುವಾರ ಕೃಷ್ಣಗಿರಿ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಉತ್ತಂಗರೈ ತಾಲೂಕಿನಲ್ಲಿ 503 ಮಿಮೀ ಅತಿ ಹೆಚ್ಚು ಮಳೆ ದಾಖಲಾಗಿದೆ.
ಸೋಮವಾರ ಮುಂಜಾನೆ 5 ಗಂಟೆಗೆ ಪಾಂಬಾರ್ ಅಣೆಕಟ್ಟೆಗೆ 15 ಸಾವಿರ ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದ್ದು, ಅಷ್ಟೇ ಪ್ರಮಾಣದಲ್ಲಿ ನೀರು ಹೊರ ಹರಿದಿದೆ.
ಉತ್ತಂಗರೈ ಬಸ್ ನಿಲ್ದಾಣದ ಬಳಿಯ ಪರಸನ್ ಕೆರೆಯ ಬಂಡ್‌ನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳು ಕೆಲವು ಮೀಟರ್‌ಗಳವರೆಗೆ ಕೊಚ್ಚಿ ಹೋಗಿವೆ. ವಿಡಿಯೋ ಇಲ್ಲಿದೆ ನೋಡಿ.