ಇಂಡಿಯಾ ಬ್ಲಾಕ್ ನ ಹಲವಾರು ನಾಯಕರು ಇಂದು ಗುರುವಾರ "ಮೋದಿ ಅದಾನಿ ಏಕ್ ಹೈ" ಮತ್ತು "ಅದಾನಿ ಸೇಫ್ ಹೈ" ಎಂಬ ಸ್ಟಿಕ್ಕರ್ ಬರಹಗಳನ್ನು ಹೊಂದಿದ ಕಪ್ಪು ಜಾಕೆಟ್ ಗಳನ್ನು ಧರಿಸಿ ಅದಾನಿ ವಿರುದ್ಧ ಜಂಟಿ ಸಂಸದೀಯ ತನಿಖೆಗೆ ಒತ್ತಾಯಿಸಿ ಸಂಸತ್ತಿನ ಆವರಣದಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಇದಕ್ಕೆ ಕೋಪಗೊಂಡ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು 'ಸಂಸತ್ತಿನ ನಿಯಮ ಪಾಲಿಸಿ' ಎಂದು ವಿರೋಧ ಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡರು. ವಿಡಿಯೋ ಇಲ್ಲಿದೆ ನೋಡಿ.