ಐಸಿಸಿ ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಆಗಮಿಸಿರುವ ಟೀಮ್ ಇಂಡಿಯಾಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಮೆನ್ ಇನ್ ಬ್ಲೂ ವಿಶೇಷ ಜರ್ಸಿಯನ್ನು ಧರಿಸಿದ್ದರು. ಜೆರ್ಸಿಯ ಮುಂಭಾಗದಲ್ಲಿ 'ಚಾಂಪಿಯನ್ಸ್' ಎಂದು ದಪ್ಪ ಅಕ್ಷರದಲ್ಲಿ ಬರೆಯಲಾಗಿತ್ತು.