ವಿಡಿಯೋ

ವಯನಾಡು ಭೂಕುಸಿತ: ನಾಲ್ಕು ಗ್ರಾಮ ನೆಲಸಮ; ಪ್ರಕೃತಿ ವಿಕೋಪದ ದೃಶ್ಯಗಳು!

ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಮೃತಪಟ್ಟವರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಹಲವು ಕುಟುಂಬಗಳು ಜಲಸಮಾಧಿಯಾಗಿವೆ. ಕನಿಷ್ಠ 400ಕ್ಕೂ ಹೆಚ್ಚು ಕುಟುಂಬಗಳು ದುರಂತದಲ್ಲಿ ಸಿಲುಕಿವೆ ಎಂದು ಹೇಳಲಾಗುತ್ತಿದೆ. ಇಂದು ನಸುಕಿನ ಜಾವ ಭೂಕುಸಿತ ಸಂಭವಿಸಿದ್ದು, ಮನೆಗಳು ಮತ್ತು ಕುಟುಂಬಗಳು ಕೊಚ್ಚಿಕೊಂಡು ಹೋಗಿವೆ.

ಮುಂಡಕ್ಕೈ, ಚೂರ್ಮಾಲ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಡಕ್ಕೈ ಗ್ರಾಮದಲ್ಲಿ ಕೆಸರಿನಲ್ಲಿ ಸಿಲುಕಿದ ವ್ಯಕ್ತಿಯೊಬ್ಬ ಗಂಟೆಗಟ್ಟಲೆ ಸಹಾಯಕ್ಕಾಗಿ ಕೂಗುತ್ತಿದ್ದ ದೃಶ್ಯ.

ಭೂಕುಸಿತ ಪ್ರದೇಶಗಳಲ್ಲಿ ವಿಪತ್ತು ಪರಿಹಾರ ಕಾರ್ಯ ಪ್ರಗತಿಯಲ್ಲಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ, ಕಂದಾಯ ಮತ್ತು ಸ್ಥಳೀಯ ಸ್ವ-ಸರ್ಕಾರ ಇಲಾಖೆಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್ ಜೊತೆ ನೇರ ಸಂವಾದ: Gen-Z ಗಾಗಿ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಕಾರ್ಯಕ್ರಮ ಆರಂಭ!

ಬೆಂಗಳೂರು: ಮಧ್ಯರಾತ್ರಿ ಅಪಾರ್ಟ್‌ಮೆಂಟ್‌ ಬಾಲ್ಕನಿಯಿಂದ ಮನಸೋಇಚ್ಛೆ ಗುಂಡು ಹಾರಿಸಿದ ಟೆಕ್ಕಿ; ಬೆಚ್ಚಿಬಿದ್ದ ಜನ! Video

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎ-14 ಪ್ರದೋಶ್ ಮಾಫಿ ಸಾಕ್ಷಿ ವಿಚಾರಣೆ, ದರ್ಶನ್ ಗೆ "ಕಂಟಕವಾಗುತ್ತಾ? ಆ.10 ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು!

ಸಂಪುಟ ವಿಸ್ತರಣೆ ಕಿಚ್ಚು: ಬಂಡಾಯ ಶಾಸಕರ ಬೆಂಬಲಗರಿಂದ ಹಲವು ಕಡೆ ಬಂದ್; ಬೀದಿಗಿಳಿದು ಪ್ರತಿಭಟನೆ!

'ಕ್ಯಾ ಬೋಲ್ತಿ ಪಬ್ಲಿಕ್': ನೀಟ್ ನಂತರ CJPಯ ಮುಂದಿನ ಟಾರ್ಗೆಟ್ ನಿರುದ್ಯೋಗ; ಜನರ ಧ್ವನಿಯಾಗಲು ದೇಶಾದ್ಯಂತ ಅಭಿಯಾನ