ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ವಾಯು ಮಾಲಿನ್ಯದ ಕುರಿತು ಕೇಂದ್ರದ ವಿರುದ್ಧ ಗುರುವಾರ ಸಂಸತ್ತಿನ ಆವರಣದಲ್ಲಿರುವ ಮಕರ ದ್ವಾರದ ಮುಂದೆ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದರು.
ಸಂಸದರು ಆಕ್ಸಿಜನ್ ಮಾಸ್ಕ್ ಧರಿಸಿ ಪ್ರಧಾನಿ ಮೋದಿಯವರನ್ನು ಟೀಕಿಸಲು ಬ್ಯಾನರ್ ಹಿಡಿದಿದ್ದು, ಅದರಲ್ಲಿ "ಮೌಸಮ್ ಕಾ ಮಜಾ ಲಿಜಿಯೇ" (ಹವಾಮಾನವನ್ನು ಆನಂದಿಸಿ) ಎಂದು ಬರೆಯಲಾಗಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದ ವೇಳೆ "ಹವಾಮಾನವನ್ನು ಆನಂದಿಸಿ" ಎಂಬ ಹೇಳಿಕೆ ನೀಡಿದ್ದರು.
ಘೋಷಣೆಗಳನ್ನು ಕೂಗುತ್ತಾ, ನಾಯಕರು ವಾಯು ಮಾಲಿನ್ಯದ ಕುರಿತು ಸಂಸತ್ತಿನ ಚರ್ಚೆಗೆ ಒತ್ತಾಯಿಸಿದರು. ವಿಡಿಯೋ ಇಲ್ಲಿದೆ ನೋಡಿ.