ಲೋಕಸಭೆಯಲ್ಲಿ 'ವಂದೇ ಮಾತರಂನ 150 ವರ್ಷಗಳು' ಕುರಿತ ಚರ್ಚೆಯಲ್ಲಿ ಸೋಮವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದರು.
ಭಾರತ ಸ್ವಾತಂತ್ರ್ಯ ಪಡೆದ 79 ವರ್ಷಗಳ ನಂತರ, ಚರ್ಚಿಸಲು ಹೆಚ್ಚು ಪ್ರಮುಖ ವಿಷಯಗಳಿದ್ದಾಗ, ರಾಷ್ಟ್ರೀಯ ಗೀತೆಯ ಕುರಿತು ಸದನವು ಏಕೆ ಚರ್ಚೆ ನಡೆಸುತ್ತಿದೆ ಎಂದು ಪ್ರಶ್ನಿಸಿದರು.
ನಾವು ಚರ್ಚಿಸುತ್ತಿರುವ ವಿಷಯವು ದೇಶದ ಆತ್ಮದ ಭಾಗವಾಗಿದೆ. ನಾವು ವಂದೇ ಮಾತರಂ ಬಗ್ಗೆ ಉಲ್ಲೇಖಿಸಿದಾಗ, ಅದು ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸುತ್ತದೆ.
ಈ ಚರ್ಚೆ ವಿಚಿತ್ರವಾಗಿದೆ; ಈ ಹಾಡು ಜನರ ಹೃದಯದಲ್ಲಿ ಸ್ಥಾನ ಪಡೆದಿದೆ; ಹಾಗಾದರೆ ಚರ್ಚೆಯ ಅಗತ್ಯವೇನು?" ಪ್ರಿಯಾಂಕಾ ಗಾಂಧಿ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.