ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾಗಿದ್ದಾರೆ ಎಂದು ಅವರ ಪಕ್ಷವಾದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವು ಡಿಸೆಂಬರ್ 30ರಂದು ತಿಳಿಸಿತು.
ಬೇಗಂ ಖಲೀದಾ ಜಿಯಾ, ಇಂದು ಬೆಳಿಗ್ಗೆ 6:00 ಗಂಟೆಗೆ ನಿಧನರಾದರು ಎಂದು ಬಿಎನ್‌ಪಿ 'ಎಕ್ಸ್' ಪೋಸ್ಟ್‌ನಲ್ಲಿ ಬರೆದಿದೆ.
ಅವರಿಗೆ ಲಿವರ್ ಸಿರೋಸಿಸ್, ಸಂಧಿವಾತ, ಮಧುಮೇಹ, ಎದೆ ಮತ್ತು ಹೃದಯ ಸಮಸ್ಯೆಗಳು ಇದ್ದವು ಎಂದು ಖಲೀದಾ ಅವರ ವೈದ್ಯರು ತಿಳಿಸಿದ್ದಾರೆ.
ಖಲೀದಾ ಜಿಯಾ ಅವರು ಭಾರತಕ್ಕೆ ಭೇಟಿ ನೀಡಿದಾಗಿನ ಕೆಲವು ದೃಶ್ಯಗಳು ಇಲ್ಲಿವೆ.