ಕಾಶ್ಮೀರವನ್ನು ಕಶ್ಯಪ್ ಎಂದು ಮರುನಾಮಕರಣ ಮಾಡಲು ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದ್ದಾರೆ ಎಂಬ ವರದಿಗಳು ತೀವ್ರ ಚರ್ಚೆ ಹುಟ್ಟುಹಾಕಿದೆ.
ಸುಳ್ಳು ಹೇಳಿಕೆ ನೀಡಿ, ಹಲವಾರು ಸುದ್ದಿ ವಾಹಿನಿಗಳು ಮತ್ತು ಪತ್ರಕರ್ತರಿಂದ ತಪ್ಪುದಾರಿಗೆಳೆಯುವ ಹೇಳಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಬಿಜೆಪಿ ಈ ಬಗ್ಗೆ ಸ್ಪಷ್ಟಪಡಿಸಿದೆ.
"ಇತ್ತೀಚಿನ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ, ಅಮಿತ್ ಶಾ ಅವರು, "ಕಾಶ್ಮೀರವನ್ನು ಕಶ್ಯಪ ಭೂಮಿ ಎಂದೂ ಕರೆಯುತ್ತಾರೆ. ಕಾಶ್ಮೀರಕ್ಕೆ ಕಶ್ಯಪನ ಹೆಸರಿಟ್ಟಿರುವ ಸಾಧ್ಯತೆ ಇದ್ದಿರಬಹುದು” ಎಂದಿದ್ದರು.
ವಿಡಿಯೋ ಇಲ್ಲಿದೆ ನೋಡಿ.