ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಾಘೇಲ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಯುತ್ತಿದೆ.
ಬಹುಕೋಟಿ ಮೌಲ್ಯದ ಮಹಾದೇವ್ ಆನ್‌ಲೈನ್ ಆ್ಯಪ್ ಬೆಟ್ಟಿಂಗ್ 'ಹಗರಣ' ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ.
ಏಜೆನ್ಸಿ ತಂಡಗಳು ಬಾಘೇಲ್ ಅವರ ಎರಡೂ ಮನೆಗಳ ಮೇಲೆ ಹಾಗೂ ಅವರ ಆಪ್ತ ಮಿತ್ರರಾಗಿರುವ ಹಿರಿಯ ಪೊಲೀಸ್ ಅಧಿಕಾರಿಯ ಮನೆಯ ಮೇಲೆ ದಾಳಿ ನಡೆಸಿವೆ. ವಿಡಿಯೋ ಇಲ್ಲಿದೆ ನೋಡಿ.