ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಿದ ‘ಗಾಜಾ ಕದನ ವಿರಾಮ‘ದ ಬಳಿಕ ಈಜಿಪ್ಟ್ ನಲ್ಲಿ ನಡೆದ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಟ್ರಂಪ್ ಸೋಮವಾರ ಭಾಷಣ ಮಾಡಿದರು.
ಇದೇ ವೇಳೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ರಂಪ್ ಹೊಗಳಿದ್ದಾರೆ. ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ ಎಂದು ಮೋದಿ ಹೆಸರೆತ್ತದೆ ಹೇಳಿದ್ದಾರೆ.
ಗಾಜಾ ಶೃಂಗಸಭೆಯಲ್ಲಿ ತಮ್ಮ ಹಿಂದೆ ನಿಂತಿದ್ದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ನೋಡುತ್ತಾ, ಪಾಕಿಸ್ತಾನ ಮತ್ತು ಭಾರತ ಒಟ್ಟಿಗೆ ಬಹಳ ಚೆನ್ನಾಗಿ ಬದುಕಲಿವೆ ಎಂದು ಟ್ರಂಪ್ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.