ದೆಹಲಿ ವಿಧಾನಸಭೆಯ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಭದ್ರತಾ ಲೋಪ ಕಂಡು ಬಂದಿದೆ.
ಮಾಸ್ಕ್ ಧರಿಸಿದ್ದ ಅಪರಿಚಿತ ಚಾಲಕನೊಬ್ಬ ಗೇಟ್ ಮೂಲಕ ಕಾರನ್ನು ಸ್ಪೀಕರ್ ಕಚೇರಿಯತ್ತ ಚಲಾಯಿಸುವ ಮೂಲಕ ತೀವ್ರ ಆತಂಕ ಸೃಷ್ಟಿಸಿದ್ದರು.
ದೆಹಲಿ ವಿಧಾನಸಭೆ ಆವರಣದ ಗಡಿಯ ಗೇಟ್‌ಗಳಲ್ಲಿ ಒಂದನ್ನು ಬಲವಂತವಾಗಿ ದಾಟಿ ಒಳನುಗ್ಗಿದ್ದ ಪ್ರಕರಣದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಆದರೆ, ಕೆಲವು ಗಂಟೆಗಳ ತೀವ್ರ ಶೋಧ ಕಾರ್ಯಾಚರಣೆಯ ನಂತರ ಆ ವ್ಯಕ್ತಿ ಸೇರಿ ಮೂರು ಜನರನ್ನು ಬಂಧಿಸಲಾಗಿದ್ದು, ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.