ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದ ಬಾಂಬ್ ದಾಳಿಯಲ್ಲಿ 5 ವರ್ಷದ ಬಾಲಕ ಮತ್ತು ಆರು ತಿಂಗಳ ಬಾಲಕಿ ಸಾವನ್ನಪ್ಪಿದ್ದು, ಅವರ ತಾಯಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಮಕ್ಕಳು ಮತ್ತು ಅವರ ತಾಯಿ ಮಲಗಿದ್ದಾಗ ಮೊಯಿರಾಂಗ್ ಟ್ರೋಂಗ್ಲಾವೊಬಿ ಪ್ರದೇಶದ ಮನೆಯ ಮೇಲೆ ಶಂಕಿತ ಉಗ್ರರು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬಾಂಬ್ ಎಸೆದಿದ್ದಾರೆ.
ಸ್ಥಳೀಯರು ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿ, ಆ ಪ್ರದೇಶದ ಪೆಟ್ರೋಲ್ ಪಂಪ್ ಬಳಿ ಎರಡು ತೈಲ ಟ್ಯಾಂಕರ್‌ಗಳು ಮತ್ತು ಟ್ರಕ್‌ಗೆ ಬೆಂಕಿ ಹಚ್ಚಿದರು.
ಅವರು ಮೊಯಿರಾಂಗ್ ಪೊಲೀಸ್ ಠಾಣೆಯ ಮುಂದೆ ಟೈರ್‌ಗಳನ್ನು ಸುಟ್ಟು ತಾತ್ಕಾಲಿಕ ಪೊಲೀಸ್ ಠಾಣೆಯನ್ನು ನಾಶಪಡಿಸಿದರು ಎಂದು ಪಿಟಿಐ ವರದಿ ಮಾಡಿದೆ. ವಿಡಿಯೋ ಇಲ್ಲಿದೆ ನೋಡಿ.