ವಿಡಿಯೋ

Watch | RSS-BJP ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ! ನಿಮ್ಮಂತ ನ್ಯಾಯಾಧೀಶರಿಂದ ನನಗೆ ನ್ಯಾಯ ಸಿಗಲು ಸಾಧ್ಯವೇ?

ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅರ್ಜಿಯ ವಿಚಾರಣೆ ಸೋಮವಾರ ದೆಹಲಿ ಹೈಕೋರ್ಟ್‌ನಲ್ಲಿ ನಡೆಯಿತು.

ನ್ಯಾ. ಸ್ವರ್ಣ ಕಾಂತ ಶರ್ಮಾ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಅವರು ಈ ಕೇಸಿನ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.

ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಆರ್‌ಎಸ್‌ಎಸ್‌ನೊಂದಿಗೆ ಸಂಯೋಜಿತ ವಕೀಲರ ಸಂಸ್ಥೆಯಾದ ಅಧಿವಕ್ತ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಾಲ್ಕು ಬಾರಿ ಭಾಗವಹಿಸಿದ್ದರು.

ಈ ಪ್ರಕರಣದ ವಿಚಾರಣೆಯು ತಮ್ಮ ಮುಂದೆ ನಿಷ್ಪಕ್ಷಪಾತವಾಗಿರುವುದಿಲ್ಲ ಎಂಬ ಗಂಭೀರ, ಪ್ರಾಮಾಣಿಕ ಮತ್ತು ಸಮಂಜಸವಾದ ಆತಂಕವಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಒಂದು ವೇಳೆ ನ್ಯಾಯಾಧೀಶರು ನಿರ್ದಿಷ್ಟ ಸಿದ್ಧಾಂತದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರೆ ವಿರೋಧ ಸಿದ್ಧಾಂತದ ವ್ಯಕ್ತಿಗೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಕೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹಾರ್ಮುಜ್ ಜಲಸಂಧಿ' ದಿಗ್ಬಂಧನ ನಡುವೆ ಟ್ರಂಪ್-ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ! ಏನೆಲ್ಲಾ ಮಾತುಕತೆ ಆಯ್ತು?

ಅಮೆರಿಕದ ಹಾರ್ಮುಜ್ ದಿಗ್ಬಂಧನದಿಂದ ಇರಾನ್‌ಗೆ ದಿನಕ್ಕೆ ಅಂದಾಜು $435 ಮಿಲಿಯನ್ ನಷ್ಟ; ಆದರೂ ದೀರ್ಘಾವಧಿಯ ಬ್ಲಾಕೇಡ್ ಕಷ್ಟ!

ತಿರುಪ್ಪೂರ್: ಟಿವಿಕೆ ವಿಜಯ್ ಪ್ರಚಾರ ಕಾರ್ಯಕ್ರಮದಲ್ಲಿ ಮಾತ್ತೊಂದು ಅವಘಡ: ಕುಸಿದುಬಿದ್ದು 15 ಮಂದಿ ಆಸ್ಪತ್ರೆಗೆ ದಾಖಲು!

ನವದೆಹಲಿ: ಸಂಪುಟ ಪುನರ್ ರಚನೆಗೆ ಪಟ್ಟು, ಹಿರಿಯ ನಾಯಕರೊಂದಿಗೆ ಚರ್ಚಿಸದೆ ಬೆಂಗಳೂರಿಗೆ ವಾಪಸ್ ಆಗಲ್ಲ: ಅಶೋಕ್ ಪಟ್ಟಣ್

ನಿನ್ನ ಮೇಲೆ ಹೈಕಮಾಂಡ್ ಸಿಟ್ಟಾಗಿದೆ: ಜಮೀರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ; ಶೀಘ್ರದಲ್ಲೇ ತಲೆದಂಡ ಸಾಧ್ಯತೆ

SCROLL FOR NEXT