ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ಬದ್ಧ: ಡಿ.ಕೆ ಶಿವಕುಮಾರ್

ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ತಮ್ಮ ಮತ್ತು ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯಕ್ತಪಡಿಸಿದರು.
DK Shivakumar
ಡಿಕೆ ಶಿವಕುಮಾರ್
Updated on: 

ಬೆಂಗಳೂರು: ಸಮಗ್ರತೆ, ಸಮರ್ಪಣೆ ಉದ್ದೇಶದೊಂದಿಗೆ ಕರ್ನಾಟಕ ಜನತೆಗೆ ಸೇವೆ ಸಲ್ಲಿಸಲು ತಮ್ಮ ಮತ್ತು ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಶಿವಕುಮಾರ್ ಜೂನ್ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಿಎಲ್‌ಪಿ ನಾಯಕರಾಗಿ ಆಯ್ಕೆಯಾದ ಕೂಡಲೇ, ಶಿವಕುಮಾರ್ ಅವರು ಲೋಕ ಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ತರುವಾಯ ರಾಜ್ಯಪಾಲರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಡಿಕೆಶಿಯನ್ನು ಆಹ್ವಾನಿಸಿದರು. ಜೂನ್ 3ರಂದು ಸಂಜೆ 4:05ಕ್ಕೆ ಲೋಕ ಭವನ ಆವರಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

DK Shivakumar
ಸಿದ್ದರಾಮಯ್ಯಗೆ ವಿಶ್ರಾಂತಿ ನೀಡಲ್ಲ, ಅವರ ಸೇವೆ ಇನ್ನೂ ಅಗತ್ಯವಿದೆ: CLP ಸಭೆಯಲ್ಲಿ ವೇಣುಗೋಪಾಲ್ ಭಾವುಕ

ಇಂದು ವಿಧಾನಸೌಧದಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ನನ್ನನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಕ್ಕೆ ನಾನು ವಿನಮ್ರನಾಗಿದ್ದೇನೆ ಎಂದು ಶಿವಕುಮಾರ್ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾವು ರಾಜ್ಯದ ಜನರಿಗೆ ಸಮರ್ಪಣೆ, ಸಮಗ್ರತೆ ಮತ್ತು ಉದ್ದೇಶದೊಂದಿಗೆ ಸೇವೆ ಸಲ್ಲಿಸಲು ಬದ್ಧರಾಗಿದ್ದೇನೆ ಎಂದು ಅವರು ಹೇಳಿದರು.

ಗುರುವಾರ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರು. ನಂತರ ರಾಜ್ಯಪಾಲ ಗೆಹ್ಲೋಟ್ ಅವರು ಮರುದಿನ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು ಸಚಿವ ಸಂಪುಟವನ್ನು ವಿಸರ್ಜಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com