ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದಿರುವುದು “ಪ್ರಜಾಪ್ರಭುತ್ವದ ಗೆಲುವು” ಮತ್ತು ಕೇಂದ್ರ ಸರ್ಕಾರಕ್ಕೆ “ಕಪ್ಪು ದಿನ” ಎಂದು ಕಾಂಗ್ರೆಸ್ ನಾಯಕಿ ಸಂಸದೆ ಪ್ರಿಯಾಂಕಾ ಗಾಂಧಿ ವ್ಯಾಖ್ಯಾನಿಸಿದ್ದಾರೆ.
ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಫೆಡರಲ್ ವ್ಯವಸ್ಥೆಯನ್ನು ಬದಲಾಯಿಸಲು ಯತ್ನಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಇಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸೋಲು ವಿರೋಧ ಪಕ್ಷಗಳ ಏಕತೆಯ ಶಕ್ತಿಯನ್ನು ತೋರಿಸಿದ್ದು, ಸಂವಿಧಾನದ ತತ್ವಗಳನ್ನು ಕಾಪಾಡಿದೆ ಎಂದು ಹೇಳಿದರು.
ನಿನ್ನೆ ನಡೆದದ್ದು ಪ್ರಜಾಪ್ರಭುತ್ವಕ್ಕೆ ದೊಡ್ಡ ಗೆಲುವು. ಸಂಯುಕ್ತ ವ್ಯವಸ್ಥೆಯನ್ನು ಬದಲಾಯಿಸುವ ಸಂಚು ವಿಫಲವಾಗಿದೆ.
ಇದು ಸಂವಿಧಾನಕ್ಕೆ, ವಿರೋಧ ಪಕ್ಷಗಳ ಏಕತೆಗೆ ಮತ್ತು ದೇಶಕ್ಕೆ ಸಂದ ಜಯ ಎಂದು ಅವರು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.