ಗುಜರಾತ್‌ನ ಮೊರ್ಬಿ ಜಿಲ್ಲೆಯ ವಿರ್ಪರ್ಡಾ ಗ್ರಾಮದಲ್ಲಿನ ಕೃಷಿ ಜಮೀನೊಂದರಲ್ಲಿರುವ 18 ಅಡಿ ಆಳದ ತೆರೆದ ಬಾವಿಯಲ್ಲಿ ನೀರು ಅಲೆಗಳಂತೆ ಏರಿಳಿಯುತ್ತಿದೆ.
ಸಮುದ್ರದ ಅಲೆಗಳಂತೆ ನೀರು ನಿರಂತರವಾಗಿ ಉಕ್ಕಿ ಹರಿಯುತ್ತಿರುವ ಈ ಈ ವಿಸ್ಮಯವನ್ನು ನೋಡಲು ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ.
ಗ್ರಾಮದ ಹೆದ್ದಾರಿ ಪಕ್ಕದಲ್ಲಿರುವ ಈ ಬಾವಿ ಇತ್ತೀಚಿನ ಭಾರಿ ಮಳೆಗೆ ಸಂಪೂರ್ಣವಾಗಿ ತುಂಬಿತ್ತು.
ಆದರೆ, ಇದ್ದಕ್ಕಿದ್ದಂತೆ ಬಾವಿಯ ಒಳಗಿನಿಂದ ಭಾರಿ ಪ್ರಮಾಣದ ಅಲೆಗಳು ಏಳಲು ಆರಂಭಿಸಿದ್ದು, ನೀರು ಹೊರಕ್ಕೆ ಚಿಮ್ಮುತ್ತಿದೆ.
ಸುತ್ತಮುತ್ತಲಿನ ಉಳಿದ ಬಾವಿಗಳಲ್ಲಿ ನೀರು ಶಾಂತವಾಗಿದ್ದರೂ, ಈ ಒಂದು ಬಾವಿಯಲ್ಲಿ ಮಾತ್ರ ನೀರು ಅಲೆಗಳಂತೆ ಏರಿಳಿಯುತ್ತಿದೆ. ವಿಡಿಯೋ ಇಲ್ಲಿದೆ ನೋಡಿ.