ಕರ್ನಾಟಕದ ವಿರುದ್ಧ ಗೆದ್ದು ಜಮ್ಮು-ಕಾಶ್ಮೀರ ತಂಡ ಅಂತಿಮವಾಗಿ ರಣಜಿ ಟ್ರೋಫಿಯನ್ನು ಈ ಬಾರಿ ತನ್ನದಾಗಿಸಿಕೊಂಡಿದೆ.
ರಣಜಿ ಟ್ರೋಫಿ ಟೂರ್ನಿಯಲ್ಲಿ ಜಮ್ಮು-ಕಾಶ್ಮೀರ ಈ ವರೆಗೂ ಮೂರು ಬಾರಿ ಕ್ವಾರ್ಟರ್ ಫೈನಲ್ ತಲುಪಿ ಗೆಲುವಿನಿಂದ ವಂಚಿತವಾಗಿತ್ತು.
ಫೆಬ್ರವರಿ 28, 2026 ರಂದು ಹುಬ್ಬಳ್ಳಿಯ ಕೆಎಸ್‌ಸಿಎ ರಾಜನಗರ ಕ್ರೀಡಾಂಗಣದಲ್ಲಿ, ಎಂಟು ಬಾರಿ ಟ್ರೋಫಿ ಗೆದ್ದ ಕರ್ನಾಟಕವನ್ನು ಸೋಲಿಸಿತು.
ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದಿಂದ ಹುಬ್ಬಳ್ಳಿಗೆ ಆಗಮಿಸಿ ಶನಿವಾರ ಕೊನೆ ದಿನದ ಆಟವನ್ನು ವೀಕ್ಷಿಸಿ ತಂಡವನ್ನು ಪ್ರೋತ್ಸಾಹಿಸಿದರು.
ನಂತರ ಟ್ರೋಫಿ ಗೆದ್ದ ತಂಡದೊಂದಿಗೆ ಪೋಸ್ ನೀಡಿದರು. ವಿಡಿಯೋ ಇಲ್ಲಿದೆ ನೋಡಿ.