ಬೆಂಗಳೂರು ಮೆಟ್ರೋ ದರಗಳಲ್ಲಿ ಮತ್ತೊಂದು ಸುತ್ತಿನ ದರ ಏರಿಕೆಗೆ ಬಿಎಂಆರ್‌ಸಿಎಲ್ ಪ್ರಸ್ತಾಪ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ, ಬೆಂಗಳೂರು ಮೆಟ್ರೋ ದೇಶದ ಅತ್ಯಂತ ದುಬಾರಿ ಮೆಟ್ರೋ ವ್ಯವಸ್ಥೆಯಾಗಿದೆ. ದರ ನಿಗದಿ ಸಮಿತಿಯ ಶಿಫಾರಸಿನಂತೆ ಈ ಹಿಂದೆ ಮಾಡಿರುವ ದರ ಹೆಚ್ಚಳವೇ ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿತ್ತು.
ಮುಂಬರುವ ಫೆಬ್ರವರಿ ತಿಂಗಳಿನಿಂದ ಮಾಡಹೊರಟಿರುವ ಪ್ರಸ್ತಾವಿತ ದುಬಾರಿ ದರದಿಂದ ಸಾಮಾನ್ಯ ನಾಗರಿಕರ ಬದುಕನ್ನು ಇನ್ನಷ್ಟು ಬರ್ಬರಗೊಳಿಸುವ ರಾಜ್ಯ ಸರ್ಕಾರ & BMRCL ನ ಪ್ರಯತ್ನ ಕಳವಳಕಾರಿಯಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.