ಪರೀಕ್ಷೆಗಳನ್ನು ನಡೆಸುವಲ್ಲಿ ಕೇಂದ್ರದ ವೈಫಲ್ಯ ಮತ್ತು ಮತ್ತೆಮತ್ತೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದರು.
ಈ ವರ್ಷ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ), ಸಿಬಿಎಸ್‌ಇ ಬೋರ್ಡ್ ಗಳು ಮತ್ತು ಸಿಯುಇಟಿ (ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ) ಸಂದರ್ಭದಲ್ಲಿ ಲಕ್ಷಾಂತರ ಯುವಕರು ಭ್ರಷ್ಟ ವ್ಯವಸ್ಥೆಯ ಪರಿಣಾಮ ಎದುರಿಸಬೇಕಾಯಿತು.
ತಲೆಮಾರುಗಳಿಂದ ಪರೀಕ್ಷೆಗಳು, ವಿಶೇಷವಾಗಿ ಸಾಮಾನ್ಯ ಹಿನ್ನೆಲೆಯಿಂದ ಬಂದವರಿಗೆ ಭವಿಷ್ಯದ ಪಾಸ್‌ಪೋರ್ಟ್ ಆಗಿದ್ದವು ಎಂದು ತರೂರ್ ಹೇಳಿದರು.
ರಾಷ್ಟ್ರೀಯ ಪರೀಕ್ಷೆಯ ನ್ಯಾಯಸಮ್ಮತತೆ ಮತ್ತು ಸಮಗ್ರತೆಯನ್ನು ಸರ್ಕಾರ ಏಕೆ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ತರೂರ್ ಪ್ರಶ್ನಿಸಿದರು. ವಿಡಿಯೋ ಇಲ್ಲಿದೆ ನೋಡಿ.