ಕರಾವಳಿಗೆ ಮುಂಗಾರು ಮಾರುತಗಳು ಪ್ರವೇಶಿಸಿವೆ. ಮುಂದಿನ ನಾಲ್ಕೈದು ದಿನಗಳ ಕಾಲ ಆರೆಂಜ್ ಅಲರ್ಟ್ ಮುಂದುವರಿಯಲಿದ್ದು, ಮಳೆಯ ಪ್ರಮಾಣದಲ್ಲಿ ಹೆಚ್ಚಳ ಸಾಧ್ಯತೆಯಿದೆ.
ಶುಕ್ರವಾರ ಬೆಳಗ್ಗೆಯಿಂದಲ್ಲೇ ಸಾಧಾರಣದಿಂದ ಉತ್ತಮ ಮಳೆಯಾಗಿದ್ದು, ರಸ್ತೆಗಳಲ್ಲೆವೂ ತುಂಬಿ ಹರಿಯುತ್ತಿವೆ.
ಮುಂಗಾರಿನ ಮೊದಲ ಭರ್ಜರಿ ಮಳೆಗೆ ಮಂಗಳೂರು ಸೇರಿದಂತೆ ಕರಾವಳಿಯ ಗ್ರಾಮಾಂತರ ಭಾಗ ತುಸು ಸ್ತಬ್ಧಗೊಂಡಿತ್ತು.
ಒಂದೇ ಮಳೆಗೆ ಗುರುಪುರ ಕೈಕಂಬ ಹೆದ್ದಾರಿ ಕೆರೆಯಂತಾಗಿತ್ತು. ಇದಲ್ಲದೆ ಹುಬ್ಬಳ್ಳಿ, ಯಾದಗಿರಿಯಲ್ಲೂ ಭಾರಿ ಮಳೆಯಾಗಿದ್ದು, ವರುಣನ ಅಬ್ಬರಕ್ಕೆ ರಾಜ್ಯ ಹೆದ್ದಾರಿ ಜಲಾವೃತವಾಗಿದೆ. ವಿಡಿಯೋ ಇಲ್ಲಿದೆ ನೋಡಿ.