ಐಸ್ಲ್ಯಾಂಡ್ ಪ್ರಧಾನಿ ಕ್ರಿಸ್ಟೂನ್ ಫ್ರಾಸ್ಟಾಡೋಟ್ಟಿರ್ ಅವರು ತಮಗೆ "ಸಂಬಂಧ್" ಪದ ಎಂದರೆ ತುಂಬಾ ಇಷ್ಟ ಎಂದು ಹೇಳಿದರು.
ಭಾರತ ಮತ್ತು ಐಸ್ಲ್ಯಾಂಡ್ ನಡುವಿನ ಭಾಷಾ ಮತ್ತು ಭಾವನಾತ್ಮಕ ಅನುರಣನವನ್ನು ಕ್ರಿಸ್ಟೂನ್ ಪ್ರಸ್ತಾಪಿಸಿದರು.
ಮಂಗಳವಾರ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಈ ಪದವನ್ನು ಬಳಸಿದ ಬಗ್ಗೆ ಪ್ರತಿಕ್ರಿಯೆಯಾಗಿ ಅವರು ಈ ಹೇಳಿಕೆ ನೀಡಿದರು.
ಮೋದಿ ಅವರು ತಮ್ಮ ಭಾಷಣ ವೇಳೆ ಹಲವಾರು ನಾರ್ಡಿಕ್ ಭಾಷೆಗಳಲ್ಲಿ, ಈ ಪದವು ಹಿಂದಿಯಲ್ಲಿರುವಂತೆಯೇ ಅದೇ ಅರ್ಥವನ್ನು ಹೊಂದಿದೆ ಎಂಬುದನ್ನು ಉಲ್ಲೇಖಿಸಿದರು. ವಿಡಿಯೋ ಇಲ್ಲಿದೆ ನೋಡಿ.