ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರವು ಅಗ್ನಿವೀರರಿಗೆ ಗುಡ್ ನ್ಯೂಸ್ ನೀಡಿದ್ದು ಸೇವಾ ವಿಸ್ತರಣಾ ಯೋಜನೆಯ ಕುರಿತು ಪ್ರಮುಖ ಘೋಷಣೆ ಮಾಡಿದೆ.
ಕೇಂದ್ರ ಸಚಿವ ಸಂಪುಟದ ನಿರ್ಧಾರದ ಪ್ರಕಾರ ಶೇ.25 ಅಗ್ನಿವೀರರು ಸಾಮಾನ್ಯ ಸೈನಿಕರಾಗುತ್ತಾರೆ. ಉಳಿದ ಶೇಕಡ 75ರಷ್ಟು ಜನರು ಎರಡು ವರ್ಷಗಳ ವಿಸ್ತರಣೆಯನ್ನು ಪಡೆಯುತ್ತಾರೆ.
ಅಗ್ನಿವೀರರ ಸೇವಾವಧಿಯನ್ನು ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ಹೆಚ್ಚಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್ಎಸ್ ರಾಜಾ ಸುಬ್ರಮಣಿ ಬುಧವಾರ ಘೋಷಿಸಿದರು.
ಎರಡು ವರ್ಷಗಳ ಅವಧಿಯನ್ನು ಪಡೆಯುವ ಅಗ್ನಿವೀರರಿಗೆ ನಂತರ ಕಾರ್ಯಕ್ಷಮತೆಯ ಮೌಲ್ಯಮಾಪನದ ಆಧಾರದ ಮೇಲೆ ಶಾಶ್ವತ ಸ್ಥಾನಗಳನ್ನು ನೀಡಲಾಗುವುದು.
ವಿಸ್ತರಣೆಗಳನ್ನು ಪಡೆಯುವ ಅಗ್ನಿವೀರರಿಗೆ ಹೆಚ್ಚಿದ ವೇತನ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ ಎಂದು ಸಿಡಿಎಸ್ ಸುಬ್ರಮಣಿ ತಿಳಿಸಿದರು. ವಿಡಿಯೋ ಇಲ್ಲಿದೆ ನೋಡಿ.