ಪಂಜಾಬ್ನ ಸಂಗ್ರೂರ್ ನಲ್ಲಿ ಬುಧವಾರ ನಡೆದ 'ಇನ್ಸಾಫ್ ರ್ಯಾಲಿ'ಯಲ್ಲಿ ಪಾಲ್ಗೊಂಡು ರಾಹುಲ್ ಗಾಂಧಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು.
ಕಾಂಗ್ರೆಸ್ 'ದೇಶವಿರೋಧಿ' ಎಂಬ ಆರೋಪದ ಕುರಿತು ಪ್ರಧಾನಿ ಮೋದಿಯವರಿಗೆ ಮುಕ್ತ ಚರ್ಚೆಗೆ ಬರುವಂತೆ ರಾಹುಲ್ ಗಾಂಧಿ ಸವಾಲು ಹಾಕಿದರು.
ಎಲ್ಲಿಗೆ ಬೇಕಾದರೂ ಬನ್ನಿ, ನನ್ನೊಂದಿಗೆ ಕುಳಿತು ಚರ್ಚಿಸಿ; ಬೇಕಿದ್ದರೆ ಮೋಹನ್ ಭಾಗವತ್ ಅಥವಾ ಅದಾನಿಯವರನ್ನೇ ತೀರ್ಪುಗಾರರನ್ನಾಗಿ ಮಾಡಿಕೊಳ್ಳಿ ಎಂದರು.
ಆದರೆ, ಅವರು ನನ್ನೊಂದಿಗೆ ಚರ್ಚೆಗೆ ಬರುವುದಿಲ್ಲ ಎಂದು ನಾನು ಖಚಿತವಾಗಿ ಹೇಳಬಲ್ಲೆ.
ಮೋದಿ ಒಬ್ಬ 'ದೇಶದ್ರೋಹಿ' ಎಂಬುದನ್ನು ನಾನು ಕೇವಲ 5 ನಿಮಿಷಗಳಲ್ಲಿ ಸಾಬೀತುಪಡಿಸುತ್ತೇನೆ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.