ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸ್ಟಿಂಗ್ ಆಪರೇಷನ್ ವಿಚಾರವಾಗಿ ತಿರುಗೇಟು ನೀಡುವ ಭರದಲ್ಲಿ ಬುಧವಾರ ಪ್ರಿಯಾಂಕ್ ಖರ್ಗೆ ಅವರು, ಎಚ್ಡಿಕೆ ಹಳ್ಳಿ ಗುಗ್ಗು ರೀತಿಯಲ್ಲಿ ಮಾತನಾಡುತ್ತಾರೆ ಎಂದು ಹೇಳಿದ್ದರು.
ಆದರೆ ಇದೀಗ ಜೆಡಿಎಸ್ ಇದನ್ನೇ ಅಭಿಯಾನವನ್ನಾಗಿ ಮಾರ್ಪಡಿಸಿ ಪ್ರಿಯಾಂಕ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಪ್ರಿಯಾಂಕ್ ಖರ್ಗೆ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ನಾಯಕರು ನಾವು 'ಹಳ್ಳಿಗುಗ್ಗು' ಏನಿವಾಗ? ಎಂಬ ಅಭಿಯಾನ ನಡೆಸುತ್ತಿದ್ದಾರೆ.
ಪೋಸ್ಟರ್ ಮೂಲಕ ನಾನು ಹಳ್ಳಿ ಗುಗ್ಗು ಏನಿವಾಗ?ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.