ಯಾಸೀನ್ ಝಬೇರ್ ಎಂಬಾತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಕಾಲಿಗೆ ಗುಂಡಿಕ್ಕಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ವಿಜಯಪುರ ತಾಲೂಕಿನ ಟಕ್ಕೇ ಗ್ರಾಮದ ನಿವಾಸಿ ಯಾಸೀನ್ ಎಂಬಾತನನ್ನು ನವೆಂಬರ್ 5ರ ಸಂಜೆ ಮುಂಡೆವಾಡಿ ಆಸ್ಪತ್ರೆಯ ಹೊರಗೆ ದುಷ್ಕರ್ಮಿಗಳ ಗುಂಪೊಂದು ಗುಂಡಿಕ್ಕಿ ಕೊಂದಿತ್ತು.
ತನ್ನ ಪತ್ನಿಗೆ ವೈದ್ಯಕೀಯ ತಪಾಸಣೆ ಮಾಡಿಸಿ ಆಸ್ಪತ್ರೆಯಿಂದ ಹೊರಬರುತ್ತಿದ್ದಾಗ ಈ ಘಟನೆ ನಡೆದಿತ್ತು.
ಸಮೀರ್ ಮುಲ್ಲಾ ಬಂಧಿತ ಆರೋಪಿ. ಬಂಧನ ಕಾರ್ಯಾಚರಣೆ ವೇಳೆ ಪಿಸ್ತೂಲ್ ತೋರಿಸಲು ಆರೋಪಿ ಸಮೀರ್ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು ಮುಲ್ಲಾನ ಕಾಲಿಗೆ ಗುಂಡು ಹಾರಿಸಿದ್ದಾರೆ. ಈ ವೇಳೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ವಿಡಿಯೋ ಇಲ್ಲಿದೆ ನೋಡಿ.